ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. 20 ಕ್ಕೂ ಹೆಚ್ಚು ಹುಂಡಿಗಳಿಂದ 2,49,07,052/- (ಎರಡು ಕೋಟಿ ನಲವತ್ತೊಂಭತ್ತು ಲಕ್ಷದ ಏಳು ಸಾವಿರದ ಐವತ್ತೆರಡು) ರೂ ಸಂಗ್ರಹವಾಗಿದೆ.
ಕಳೆದ ಬಾರಿಗಿಂತ 45 ಲಕ್ಷ ಹೆಚ್ಚುವರಿಯಾಗಿ ಹಣ ಸಂಗ್ರಹವಾಗಿದೆ. ನಂಜನಗೂಡು ದೊಡ್ಡ ಜಾತ್ರೆ ಅಂಗವಾಗಿ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ. ಈ ಬಾರಿಯೂ ನಿಷೇಧಿತ ನೋಟುಗಳನ್ನ ಭಕ್ತರು ಕಾಣಿಕೆಯಾಗಿ ಒಪ್ಪಿಸಿದ್ದಾರೆ. 41 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಕಾಣಿಕೆಯಾಗಿ ಬಂದಿದೆ. ಇದನ್ನೂಓದಿ :- ನಮ್ಮ ಸಿದ್ದಾಂತ ನಂಬಿ ಯಾರು ಪಕ್ಷಕ್ಕೆ ಬರ್ತಾರೋ ಅವ್ರನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ – ಬೊಮ್ಮಾಯಿ
ನಗದು ಜೊತೆಗೆ 220 ಗ್ರಾಂ ಚಿನ್ನ ಹಾಗೂ 6 ಕೆಜಿ 500 ಗ್ರಾಂ ಬೆಳ್ಳಿ ಸಹ ಸಂಗ್ರಹವಾಗಿದೆ. ಕಳೆದ ಬಾರಿ 28,500 ಮೌಲ್ಯದ ನಿಷೇಧಿತ ನೋಟುಗಳು ಸಂಗ್ರಹವಾಗಿತ್ತು. ಈ ಬಾರಿ 41 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿದೆ. ಜೊತೆಗೆ 111 ವಿದೇಶಿ ಕರೆನ್ಸಿಗಳು ಸಹ ಭಕ್ತರು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಇದನ್ನೂಓದಿ :- CID ನೋಟಿಸ್ ಗೆ ಕಡೆಗೂ ಉತ್ತರ ಕೊಟ್ಟ ಪ್ರಿಯಾಂಕ ಖರ್ಗೆ