ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳುವ ಮೂಲಕ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 25ರಂದು ಹೈಕಮಾಂಡ್ ಏನು ಸೂಚನೆ ನೀಡುತ್ತದೆ ಎಂದು ಕಾಯುತ್ತಿದ್ದೇನೆ. ನಾನು ಯಾರನ್ನು ಸಿಎಂ ಮಾಡಬೇಕೆಂದು ಸಲಹೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಯಾವ ತೀರ್ಮಾನ ಬೆಕಾದರೂ ಮಾಡಲಿ. ಯಾವ ಸಮುದಾಯಕ್ಕೆ ನೀಡಬೇಕೆಂಬುದರ ಬಗ್ಗೆಯೂ ಮಾತಾನಾಡಲ್ಲ. ಯಾವುದೇ ಹೆಸರನ್ನು ನಾನು ಶಿಫಾರಸ್ಸು ಮಾಡುವುದಿಲ್ಲ. ಇನ್ನೂ ಹೈಕಮಾಂಡ್ ಸಂದೇಶ ಬಾರದೇ ಈಗಲೇ ಯಾಕೆ ಅವಸರದ ಮಾತು ಎಂದು ಅವರು ಹೇಳಿದರು.
25ಕ್ಕೆ ಸಂದೇಶ ಬರಬಹುದು ಎಂದು ಕಾಯುತ್ತಿದ್ದೇನೆ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಪಕ್ಷ ಸಂಘಟನೆ ಮಾಡಿ ಮುಂದೆಯೂ ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.