ರಷ್ಯಾ ನಡೆಸುತ್ತಿರುವ ದಾಳಿ 13ನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೆ ಉಕ್ರೇನ್ ನಲ್ಲಿ 202 ಶಾಲೆ ಹಾಗೂ 34 ಆಸ್ಪತ್ರೆಗಳು ಧ್ವಂಸಗೊಂಡಿವೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಮೂರನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಮಾತುಕತೆ ನಡೆವೆಯೂ ಯುದ್ಧ ಮುಂದುವರಿದಿದೆ. ಮತ್ತೊಂದೆಡೆ ಉಕ್ರೇನ್ ಕೂಡ ಪ್ರತಿದಾಳಿ ನಡೆಸಿ ಪ್ರತಿರೋಧ ಒಡ್ಡುತ್ತಿದೆ.
ಉಕ್ರೇನ್ ರಾಜಧಾನಿ ಕೀವ್, ಖಾರ್ಕಿವ್, ಮರಿಯೊಪೌಲ್, ಸುಮಿ ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ.