ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲು ಘೋಷಣೆ ಮಾಡಿ ಕೇಂದ್ರ ಸರಕಾರ ಮಹತ್ವದ ಘೋಷಣೆ ಮಾಡಿದೆ.
ಗುರುವಾರ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್, ಎಂಡಿ, ಎಸ್, ಬಿಡಿಎಸ್, ಮತ್ತು ಡಿಪ್ಲೊಮಾ ವಿಭಾಗದಲ್ಲಿ ಶೇ.10ರಷ್ಟು ಮೀಸಲು ಪ್ರಕಟಿಸಿದೆ.
ಅಖಿಲ ಭಾರತ ಮಟ್ಟದಲ್ಲಿನ ಅಂಡರ್ ಗ್ರ್ಯಾಚ್ಯುಯೆಟ್ ಮತ್ತು ಪೋಸ್ಟ್ ಗ್ರ್ಯಾಚ್ಯುಯೆಟ್ ಕಾರ್ಯಕ್ರಮಗಳಿಗೆ ಈ ಘೋಷಣೆ ಅನ್ವಯ ಆಗಲಿದೆ. ಇದರಿಂದ 5550 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ಘೋಷಣೆಯು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಜಾತಿ ಆಧಾರಿತ ಹೊಂದಾಣಿಕೆ ಹಾಗೂ ಮತಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗಿದೆ.