ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ 29 ಶಾಸಕರು ಸ್ಥಾನ ಪಡೆದಿದ್ದು, ಬುಧವಾರ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಂಪುಟದಲ್ಲಿ ಸ್ಥಾನ ಬಡೆದಿದ್ದ ಬಹುತೇಕ ಶಾಸಕರೇ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬೊಮ್ಮಾಯಿ ಸಂಪುಟದಲ್ಲಿ 8 ಲಿಂಗಾಯತ, 7 ಒಕ್ಕಲಿಗ, 7 ಹಿಂದುಳಿದ ವರ್ಗ, 3 ಎಸ್ ಸಿ, 1 ಎಸ್ ಟಿ, ಒಬ್ಬ ಮಹಿಳೆಗೆ ಸ್ಥಾನ ದೊರೆತಿದೆ. ಈ ಮೂಲಕ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಮಣೆ ಹಾಕಲಾಗಿದೆ.
ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್ ಮತ್ತು ವಿಶ್ವನಾಥ್ ಗೆ ಸ್ಥಾನ ದೊರೆತಿಲ್ಲ. ಈ ಮೂಲಕ ಸಂಪುಟ ವಿಸ್ತರಣೆಯಲ್ಲೂ ಯಡಿಯೂರಪ್ಪ ಪ್ರಭಾವ ಸ್ಪಷ್ಟವಾಗಿ ಕಂಡು ಬಂದಿದೆ.