ಬೆಂಗಳೂರು: 2020-21 ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಪರೀಕ್ಷೆಗಳು ಮೇ 24 ರಿಂದ ಜೂ. 16ರವರೆಗೆ ನಡೆಯಲಿವೆ. ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ದ್ವಿತೀಯ ಪಿಯುಸಸಿ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದಾರೆ.
ಇತ್ತೀಚೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಒಂದು ವಾರ ಅವಕಾಶ ಕೊಡಲಾಗಿತ್ತು. ಆಕ್ಷೇಪಣೆ ಪರಿಶೀಲನೆ ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ರಚನೆ ಮಾಡಲಾಗಿದೆ. ಮೇ 24 ರಿಂದ ಜೂನ್ 16ರ ವರೆಗೆ ದ್ವೀತಿಯ ಪಿಯಸಿ ಪರೀಕ್ಷೆಗಳು ನಡೆಯಲಿವೆ.

ಮೇ. 24 – ಇತಿಹಾಸ, ಮೇ. 25- ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ, ಮೇ. 26- ಭೂಗೋಳ ಶಾಸ್ತ್ರ, ಮೇ.27 – ಮನಃಶಾಸ್ತ್ರ/ ಮೂಲಗಣಿತ, ಮೇ.28 – ತರ್ಕಶಾಸ್ತ್ರ, ಮೇ. 29 – ಹಿಂದಿ, ಮೇ. 31 – ಇಂಗ್ಲಿಷ್, ಜೂ.1 -ಮಾಹಿತಿ ತಂತ್ರಜ್ಞಾನ/ಹೆಲ್ತ್‌ಕೇರ್/ವೆಲ್‍ನೆಸ್‍ಬ್ಯೂಟಿ, ಜೂ. 2 – ರಾಜ್ಯಶಾಸ್ತ್ರ/ಗಣಕ ವಿಜ್ಞಾನ, ಜೂ.3- ಜೀವವಿಜ್ಞಾನ/ಎಲೆಕ್ಟ್ರಾನಿಕ್ಸ್ , ಜೂ.4 – ಅರ್ಥಶಾಸ್ತ್ರ, ಜೂ. 5 – ಗೃಹ ವಿಜ್ಞಾನ, ಜೂ.7 – ವ್ಯವಹಾರ ಅಧ್ಯಯನ/ ಭೌತವಿಜ್ಞಾನ, ಜೂ. 8 ಐಚ್ಛಿಕ ಕನ್ನಡ, ಜೂ.9 ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್, ಜೂ. 10 ಸಮಾಜ ಶಾಸ್ತ್ರ/ ರಸಾಯನವಿಜ್ಞಾನ, ಮೇ. 11 – ಉರ್ದು/ ಸಂಸ್ಕೃತ, ಮೇ.12 ಸಂಖ್ಯಾಶಾಸ್ತ್ರ, ಜೂ.14 – ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ, ಜೂ.15- ಭೂಗರ್ಭಶಾಸ್ತ್ರ, ಜೂ. 16- ಕನ್ನಡ ಪರೀಕ್ಷೆ.
ಕೊರೋನಾ ಹಿನ್ನಲೆ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳನ್ನು ಜನವರಿಯಿಂದ ಆರಂಭಿಸಲಾಗಿತ್ತು. ಜನವರಿ 1ರಿಂದ 10 ಹಾಗೂ 12ನೇ ತರಗತಿ ಪ್ರಾರಂಭ ಮಾಡಲು ನಿರ್ಧರಿಸಲಾಯಿತು. 6ರಿಂದ 9ನೇ ತರಗತಿವರೆಗೆ ಪರಿಷ್ಕೃತ ವಿದ್ಯಾಗಮ ಶುರು ಮಾಡಲಾಯಿತು. ಶಾಲೆಗಳಲ್ಲಿ ಸರಾಸರಿ ಹಾಜರಾತಿ ಶೇ. 75 ರಷ್ಟು ಹಾಜರಾತಿ ಕಂಡು ಬಂದಿತ್ತು.