ಬೆಂಗಳೂರಿನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ನಾಲ್ವರಿಗೆ ಗಾಯಗಳಾಗಿವೆ. ಕಳೆದ 24 ಗಂಟೆಯಲ್ಲಿ ನಗರದಲ್ಲಿ ಕುಸಿದುಬಿದ್ದ 2ನೇ ಕಟ್ಟಡ ಇದಾಗಿದೆ.
ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ ನಿನ್ನೆ 3 ಅಂತಸ್ತಿನ ಮನೆ ಕುಸಿದು ಬಿದ್ದ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಡೇರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾರ್ಟರ್ಸ್ ನ 50 ವರ್ಷದ ಕಟ್ಟಡ ಕುಸಿದುಬಿದ್ದಿದೆ. ಇದು ಡೇರಿ ಸರ್ಕಲ್ ಬಳಿಯಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ,ಪೊಲೀಸರು ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟಡ ಕುಸಿತದ ವೇಳೆ ಸಿಕ್ಕಿಬಿದ್ದಿದ್ದ ಎರಡು ಶ್ವಾನಗಳನ್ನು ರಕ್ಷಿಸಲಾಗಿದೆ. ಇಂದು ಕೂಡ ಕಟ್ಟಡ ಕುಸಿತದಲ್ಲಿ ಭಾರೀ ಅನಾಹುತ ತಪ್ಪಿದ್ದು, ಒಂದರ ಹಿಂದೆ ಮತ್ತೊಂದು ಎಂಬಂತೆ ಕಟ್ಟಡ ಕುಸಿತ ಪ್ರಕರಣಗಳು ಸಂಭವಿಸುತ್ತಿರುವುದು ಜನತೆಯನ್ನು ಆತಂಕಕ್ಕೀಡುಮಾಡಿದೆ.
ಕುಸಿತಗೊಂಡ ಕಟ್ಟಡ 50 ವರ್ಷದ ಹಳೆಯದ್ದಾಗಿದೆ. ನಾಳೆ ಕೆಎಂಎಫ್ನಲ್ಲಿ ಸಿಎಂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಟ್ಟಡದಲ್ಲಿ 18 ಕುಟುಂಬ ವಾಸವಾಗಿತ್ತು. ಕೆಎಂಎಫ್ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ಮನೆಯಿಂದ ಹೊರ ಓಡಿದ್ದಾರೆ. ಇದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.