ವೈಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮೂರು ಚಿನ್ನ..

ನವದೆಹಲಿ. ಒಲಂಪಿಕ್ ಕ್ರೀಡಾವಳಿಯಲ್ಲಿ ಈ ಬಾರಿ ಭಾರತ ಮೂರು ಚಿನ್ನದ ಪದಕ, ಮೂರು ಬೆಳ್ಳಿಯ ಪದಕ ಹಾಗೂ ಆರು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
50 ಕೆಜಿಯ ವೈಟ್ ಲಿಫ್ಟಿಂಗ್ ನಲ್ಲಿ ಹರಿಯಾಣದ ಮಿನಾಕ್ಷಿ ಚಿನ್ನದ ಪದಕವನ್ನು ಗೆದ್ದಿದ್ದು, ಬೆಳ್ಳಿ ಪದಕವನ್ನು ಹೆನ್ನಿ ಕುಮಾರಿ ಹಾಗೂ ಕಂಚಿನ ಪದಕವನ್ನು ಸ್ವಾತಿ ಶಿಂಧೆ ಮತ್ತು ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಅಲ್ಲದೇ, 57 ಕೆಜಿ ವೈಟ್ ಲಿಫ್ಟಿಂಗ್ ನಲ್ಲಿ ಹರಿಯಾಣದ ಅನ್ಶು ಚಿನ್ನ ಗೆದ್ದರೆ ಬೆಳ್ಳಿ ಪದಕವನ್ನ – ಲಲಿತಾ ಹಾಗೂ ಕಂಚಿನ ಪದಕವನ್ನ ರಾಮನ್ ಯಾದವ್ ಮತ್ತು ಮಾನ್ಸಿ ಪಡೆದುಕೊಂಡಿದ್ದಾರೆ. 62 ಕೆಜಿ ವಿಭಾಗದ ವೈಟ್ ಲಿಫ್ಟಿಂಗ್ ನಲ್ಲಿ, ಚಿನ್ನದ ಪದಕವನ್ನ – ಸೋನಮ್ ಬೆಳ್ಳಿಪದಕವನ್ನ – ಸಾಕ್ಷಿ ಮಲಿಕ್ ಕಂಚಿನ ಪದಕವನ್ನ – ಪುಷ್ಪಾ ಮತ್ತು ಮನೀಶಾ ಪಡೆದಿದ್ದಾರೆ. ಈ ಎಲ್ಲಾ ಪದಕಗಳನ್ನ ಗೆದ್ದು ಸಾಧನೆ ಮಾಡಿದ ಇವರಿಗೆ ಧನ್ಯವಾದ ಸಲ್ಲಿಸಲೇಬೇಕು..