ದಾಳಿ ನಡೆಸುತ್ತಿರುವ ರಷ್ಯಾದ 12 ಸಾವಿರ ಯೋಧರನ್ನು ಇದುವರೆಗೆ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ.
ಉಕ್ರೇನ್ ಮಾನವ ಹಕ್ಕುಗಳ ಸಂಸದೀಯ ಆಯುಕ್ತ ಲೈಡುಮಿಯಾ ಡೆನಿಸೊವಾ ಗುರುವಾರ ಈ ಮಾಹಿತಿ ನೀಡಿದ್ದು, ರಷ್ಯಾ ದಾಳಿಯಲ್ಲಿ ಇದುವರೆಗೆ 38 ಮಕ್ಕಳು ಮೃತಪಟ್ಟಿದ್ದು, 71 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 28ರಂದು ದಾಳಿ ಆರಂಭಿಸಿದ ರಷ್ಯಾ, ಉಕ್ರೇನ್ ನ ಹಲವಾರು ನಗರಗಳ ಮೇಲೆ ಬಾಂಬ್ ಗಳ ಸುರಿಮಳೆ ಸುರಿಸಿದೆ. ಬಹುಮಹಡಿ ಕಟ್ಟಡಗಳು ಹಾನಿಗೊಳಗಾಗಿವೆ. ಇದುವರೆಗೆ 13 ದಶಲಕ್ಷ ನಾಗರಿಕರು ದೇಶ ತೊರೆದಿದ್ದಾರೆ ಎಂದು ಅವರು ತಿಳಿಸಿದರು.
ರಷ್ಯಾ ದಾಳಿಗೆ ಪ್ರತಿರೋಧ ಒಡ್ಡಿರುವ ಉಕ್ರೇನ್ ಸೈನಿಕರು ಹಾಗೂ ನಾಗರಿಕರು ಇದುವರೆಗೆ 1200 ರಷ್ಯನ್ ಯೋಧರನ್ನು ಹತ್ಯೆ ಮಾಡಿದ್ದು, 49 ಯುದ್ಧ ವಿಮಾನ, 81 ಹೆಲಿಕಾಫ್ಟರ್ ಮತ್ತು 335 ಯುದ್ಧ ಟ್ಯಾಂಕ್ ಗಳನ್ನು ನಾಶಪಡಿಸಿದ್ದಾರೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ.
ಹತ್ಯೆಗೊಳಗಾದ ಸೈನಿಕರಲ್ಲಿ 1105 ಶಸ್ತ್ರಸಜ್ಜಿತ ಸೈನಿಕರು ಸೇರಿದ್ದು, 526 ವಾಹನ ಮತ್ತು 60 ಇಂಧನ ಟ್ಯಾಂಕ್ ಗಳನ್ನ ನಾಶಪಡಿಸಲಾಗಿದೆ. 56 ಮಲ್ಟಿಪಲ್ ರಾಕೆಟ್ ಲಾಂಚರ್, 29 ವಿಮಾನ ನಿಗ್ರಹ ಲಾಂಚರ್ ಗಳು 7 ಡ್ರೋಣ್ ಗಳು ಕೂಡ ಧ್ವಂಸಗೊಳಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.