ಬಟ್ಟೆ ತೊಳೆಯುಲು ಹೋಗಿದ್ದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸಂಭವಿಸಿದೆ.
ಪರಶುರಾಮ ಗೋಪಾಲ ಬನಸುಡೆ (36), ಸದಾಶಿವ ಬನಸುಡೆ (24), ಶಂಕರ ಬನಸುಡೆ (20), ದರೇಪ್ಪ ಬನಸುಡೆ (22) ಮೃತಪಟ್ಟ ದುರ್ದೈವಿಗಳು.
ಊರಲ್ಲಿ ಜಾತ್ರೆ ಪ್ರಯುಕ್ತ ನದಿಗೆ ಬಟ್ಟೆ ತೊಳೆಯಲು ಕುಟುಂಬ ಸಮೇತ ಬಂದಿದ್ದ ನಾಲ್ವರು ಸಹೋದರರು ಮೃತಪಟ್ಟಿದ್ದಾರೆ. ಆಯ ತಪ್ಪಿ ನದಿಗೆ ಬಿದ್ದಿದ್ದ ಸದಾಶಿವ ಬನಸುಡೆ ಅವರನ್ನು ರಕ್ಷಿಸಲು ಉಳಿದ ಸಹೋದರರು ನೀರಿಗೆ ಹಾರಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.