ಬಾಗಲಕೋಟೆ: ಒಂದೇ ಕುಟುಂಬದ ನಾಲ್ವರ ಸಾವು!

15 ದಿನಗಳ ಅಂತರದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಸಂಭವಿಸಿದೆ.

ಮಹಾಮಾರಿ ಕೊರೊನಾಗೆ 15 ದಿನಗಳಲ್ಲಿ ಎರಡು ಕುಟುಂಬಗಳ ಸಂಬಂಧಿಗಳಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟರೆ ಮತ್ತಿಬ್ಬರು ಅಸ್ತಮಾದಿಂದ ಮೃತಪಟ್ಟಿದ್ದಾರೆ.

ಆಸಂಗಿ ಗ್ರಾಮದ ಶಿರಹಟ್ಟಿ ಹಾಗೂ ಪಡನಡಿ ಸಂಬಂಧಿಗಳಲ್ಲಿ ಬಾಳಪ್ಪ ಶಿರಹಟ್ಟಿ (89) ಹಾಗೂ ಸುಮಿತ್ರಾ ಭೂಪಾಲ ಶಿರಹಟ್ಟಿ (61) ಒಬ್ಬರಿಗೂ ಚಿಕಿತ್ಸೆ ಫಲಿಸದೆ ಕೊರೊನಾದಿಂದ ಮೃತಪಟ್ಟಿದ್ದರೆ ಕಾಶವ್ವ ಶ್ರೀಪಾಲ ಪಡನಡಿ (42) ಮತ್ತು ಶೋಭಾ ಅಲ್ಲಪ್ಪ ಪಡನಡಿ(245) ಅಸ್ತಮಾ ರೋಗಕ್ಕೆ ಬಲಿಯಾಗಿದ್ದಾರೆ.

ಕೊರೊನಾ 2ನೇ ಅಲೆ ಬಹಳಷ್ಟು ಜನರಿಗೆ ಇನ್ನಿಲ್ಲದ ತೊಂದರೆ ಕೊಟ್ಟಿದೆ. ಮದುವೆ, ಮಕ್ಕಳೊಂದಿಗೆ ಸುಂದರ ಬದುಕು ನಡೆಸುತ್ತಿದ್ದವರ ಬಾಳಿಗೆ ಕೊಳ್ಳೆ ಇಡುತ್ತಿದೆ. ವಾರದ ಹಿಂದೆ ನೆಮ್ಮದಿಯ ಬದುಕು ನಡೆಸುತ್ತಿದ್ದವರ ಕುಟುಂಬಗಳೀಗ ಸಂಕಷ್ಟಕ್ಕೆ ಒಳಗಾಗುತ್ತಿದೆ. ಕುಟುಂಬಸ್ಥರನ್ನು ಕಳೆದುಕೊಂಡವರಲ್ಲಿ ನೀರವ ಮೌನ ತಾಳಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!