ಅದೊಂದು ಸರಕಾರಿ ಪ್ರೌಢಶಾಲೆ. ಈ ಶಾಲೆ ಕಳ್ಳರಿಗೆ ಅದ್ಯೋಕೊ ಫೇವರೇಟ್ ಶಾಲೆಯಾಗಿದೆ. ಆ ಶಾಲೆ ಒಂದಲ್ಲ ಎರಡಲ್ಲಾ ನಾಲ್ಕು ಬಾರಿ ಕಳ್ಳತನವಾಗಿದೆ. ಆ ಶಾಲೆ ಗ್ರಾಮದಿಂದ ಹೊರ ಇರೋದೆ ಕಳ್ಳರ ಕೈ ಚಳಕಕ್ಕೆ ಸಹಾಯ ವಾಗುತ್ತಿದೆ.
ಹೌದು, ರೇಷ್ಮೆ ನಗರಿ ರಾಮನಗರ ತಾಲ್ಲೂಕಿನ ಪಾದ್ರಹಳ್ಳಿ ಸರಕಾರಿ ಪ್ರೌಢಶಾಲೆ ಕಳ್ಳರ ಹಾಟ್ ಸ್ಪಾಟ್ ಹಾಗಿ ಮಾರ್ಪಟ್ಟಿದೆ. ಈ ಶಾಲೆ ಬರೋಬರಿ ನಾಲ್ಕು ಸಲ ಕಳ್ಳತನವಾಗಿದೆ. ಈ ಬಾರಿ ಕಳ್ಳತನ ಮಾಡಿರುವ ಕಳ್ಳರು ಒಂದು ಕಂಪ್ಯೂಟರ್ ಹಾಗೂ ಕುಡಿಯುವ ನೀರಿನ ಆರ್.ಓ ಪ್ಲಾಂಟ್ ಗೆ ಅಳವಡಿಸಿದ್ದ ಮೋಟರ್ ನ್ನ ಕಳವು ಮಾಡಿದ್ದಾರೆ. ಅಲ್ಲದೇ ಶಾಲೆಯ ಕೆಲ ಕೊಠಡಿಗಳ ಬೀಗಗಳನ್ನ ಹೊಡೆದಿದ್ದಾರೆ. ಕೊಠಡಿಗಳ ಒಳಗಿದ್ದ ಬೀರುಗಳನ್ನ ಹೊಡೆದು ಒಳಗಿದ್ದ ದಾಖಲೆಗಳನ್ನ ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಅಂದಹಾಗೇ ಈ ಶಾಲೆ ಗ್ರಾಮದಿಂದ ಹೊರ ಭಾಗದಲ್ಲಿ ಇದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕಳ್ಳರು ಹಾಗಾಗಾ ಕಳ್ಳತನ ಮಾಡುತ್ತಿದ್ದಾರೆ. ಇತ್ತ ವಿಷಯ ತಿಳಿದ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಅಲ್ಲದೇ ಬೆರಳಚ್ಚು ತಜ್ಞರನ್ನ ಸ್ಥಳಕ್ಕೆ ಕರೆಯಿಸಿ ತಪಾಸಣೆ ಮಾಡಿಸಿದ್ರು. ಒಂದೇ ಶಾಲೆಯನ್ನ 4 ಬಾರಿ ಕಳ್ಳತನ ಮಾಡಿದ್ರು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಒಟ್ಟಾರೆ ಗ್ರಾಮದ ಹೊರ ಭಾಗದಲ್ಲಿ ಇರುವ ಶಾಲೆಯನ್ನೆ ಟಾರ್ಗೆಟ್ ಮಾಡಿಕೊಂಡಿರುವ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇಂತಹ ಚಾಲಾಕಿ ಕಳ್ಳರ ಕೈಗೆ ಪೊಲೀಸರು ಕೋಳವನ್ನ ತೊಡಿಸಬೇಕಿದೆ.