ಕೊರೊನಾ ಟೆಸ್ಟ್ ಫಲಿತಾಂಶದ ವರದಿಯನ್ನು ತಡವಾಗಿ ಅಪ್ ಲೋಡ್ ಮಾಡಿದ್ದಕ್ಕಾಗಿ ರಾಜ್ಯದ 40 ಲ್ಯಾಬ್ ಗಳಿಗೆ 20 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಕೋವಿಡ್ ಟೆಸ್ಟ್ ಮುಖ್ಯಸ್ಥೆ ಹಾಗೂ ನೋಡಲ್ ಅಧಿಕಾರಿ ಶಾಲಿನಿ ರಜನೀಶ್ ಅವರ ಜೊತೆ ಚರ್ಚೆ ನಡೆಸಿದ ನಂತರ ಬೆಂಗಳೂರಿನಲ್ಲಿ ಮಂಗಳವಾರ ಪ್ರಕಟಣೆಯಲ್ಲಿ ಡಿಸಿಎಂ ಈ ವಿಷಯ ತಿಳಿಸಿದ್ದಾರೆ.
31 ಖಾಸಗಿ ಹಾಗೂ 9 ಸರಕಾರಿ ಆಸ್ಪತ್ರೆಗಳು ಸುಮಾರು 24 ಗಂಟೆಗಳಷ್ಟು ತಡವಾಗಿ ಕೊರೊನಾ ಟೆಸ್ಟ್ ಫಲಿತಾಂಶವನ್ನು ಸರಕಾರಕ್ಕೆ ಮಾಹಿತಿ ನೀಡಿಲ್ಲ. ಮೇ 8ರಿಂದ ಸುಮಾರು 10,103 ಪರೀಕ್ಷಾ ಫಲಿತಾಂಶಗಳು ತಡವಾಗಿ ಬಂದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9 ಸರಕಾರಿ ಲ್ಯಾಬ್ ಗಳಿಂದ 3034 ಹಾಗೂ 31 ಖಾಸಗಿ ಲ್ಯಾಬ್ ಗಳಿಂದ 7069 ಲ್ಯಾಬ್ ಗಳಿಂದ ಪರೀಕ್ಷಾ ವರದಿಗಳು ತಡವಾಗಿ ಬಂದಿವೆ. ಪ್ರತಿ ವರದಿಗೆ 200 ರೂ.ನಂತೆ ದಂಡ ವಿಧಿಸಲಾಗಿದೆ.
ಈ ಲ್ಯಾಬ್ ಗಳು ಐಸಿಎಂಆರ್ ಗೆ ಕೊರೊನಾ ಟೆಸ್ಟ್ ಅಪ್ ಲೋಡ್ ಮಾಡುವ ಮುನ್ನವೇ ಆ ವ್ಯಕ್ತಿಗಳಿಗೆ ವಿವರ ನೀಡಿದೆ. ಇದರಿಂದ ಐಸಿಎಂಆರ್ ಗಮನಕ್ಕೆ ತಡವಾಗಿ ತರಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.