ಚಿತ್ರರಂಗದ ಸ್ಟಾರ್ ನಟರನ್ನ ಭೇಟಿಯಾಗೋದು ಅಷ್ಟು ಸಲೀಸಲ್ಲ. ಹೀಗಾಗಿ ಇಲ್ಲೊಬ್ಬ ಅಭಿಯಾನಿ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಬರೋಬ್ಬರಿ 400 ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದಾರೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿಗಾಗಿ ಬಳ್ಳಾರಿಯ ಲಾಲ ಕಮಾನ್ ನಿವಾಸಿ ಬಿ.ಚಂದ್ರಶೇಖರ್ ಬಳ್ಳಾರಿಯಿಂದ ಹೈದರಾಬಾದ್ ವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ. ಕಳೆದ ಸೋಮವಾರ ಪಾದಯಾತ್ರೆ ಆರಂಭಿಸಿರುವ ಚಂದ್ರಶೇಖರ್ ಇಂದು ಹೈದರಾಬಾದ್ ನ ಶಾದ್ ನಗರ ತಲುಪಿದ್ದಾರೆ. ಇದನ್ನೂ ಓದಿ : – ಆರ್ ಎಸ್ ಎಸ್ ಕಳೆದ 75 ವರ್ಷಗಳಿಂದ ಜನಸೇವೆ ಮಾಡ್ತಿದೆ – ಸಿಎಂ ಬೊಮ್ಮಾಯಿ
ಸಂಜೆ ಪವನ್ ಕಲ್ಯಾಣ್ ಹಾಗೂ ರಾಮ್ ಚರಣ್ರನ್ನ ಭೇಟಿಯಾಗಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪವನ್ ಕಲ್ಯಾಣ್ ರನ್ನ ಭೇಟಿಯಾಗಲು ಪ್ರಯತ್ನಿಸಿದರೂ ಚಂದ್ರಶೇಖರ್ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಳ್ಳಾರಿಯಿಂದ ಹೈದರಾಬಾದ್ ವರೆಗೂ ಪಾದಯಾತ್ರೆ ಮೂಲಕ ತೆರಳಿ ನೆಚ್ಚಿನ ನಟನನ್ನ ಭೇಟಿಯಾಗುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ : – ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ