ಇಲ್ಲೊಬ್ಬ ಅಸಾಮಿ ಸಂಚಾರಿ ನಿಯಮ ಉಲ್ಲಂಘಿಸಿಯೂ ರಾಜಾ ರೋಷವಾಗಿ ಪೊಲೀಸರ ಮುಂದೆ ತಿರುಗುತ್ತಿದ್ದ. ಅದರೂ ಪೊಲೀಸರೂ ಎಲ್ಲಿಯೂ ಇತನನ್ನ ಹಿಡಿಯುತ್ತಿರಲಿಲ್ವಾ ಅಂತಾ ನೀಮಗೆ ಅನ್ನಿಸ್ತಿದೆ ಅಲ್ವಾ..? ಅನ್ನಿಸಲೇ ಬೇಕು ಬಿಡಿ. ಅದ್ರೆ ಈತ ಪೊಲೀಸರಿಂದ ತಪ್ಪಿಸಿ ಕೊಳ್ಳಲು ಗಾಡಿ ಮೇಲೆ ಓರ್ವ ಅಧಿಕಾರಿಯ ಅಭಿಮಾನಿ ಅಂತಾ ಬರೆದಿದ್ದ… ಅ ಅಧಿಕಾರಿಯ ಹೆಸರು ಏನು..? ಅತನ ಬೈಕ್ ಮೇಲೆ ಇರುವ ದಂಡ ಎಷ್ಟು ಗೊತ್ತಾ..?
ಈ ಬೈಕ್ ನ್ನೊಮ್ಮೆ ಸರಿಯಾಗಿ ನೋಡಿ ಬಿಡಿ.. ಎಲ್ಲಿ ನೋಡಿದ್ರೂ ಫುಲ್ ಸ್ಟಿಕರ್ ಅಂಟಿಸಿರೋದೆ ಕಾಣುತ್ತಲ್ವಾ.. ಈತ ಸಂಚಾರಿ ಜಂಟಿ ಆಯುಕ್ತ ರವಿಕಾಂತೇ ಗೌಡರ ದೊಡ್ಡ ಅಭಿಮಾನಿಯಂತೆ.. ಹೆಸರು ಗಿರೀಶ್ ಬಾಬು ಅಂತಾ.. ಅವರ ಹೆಸರನ್ನ ಗಾಡಿ ಮೇಲೆ ಬರೆಸಿದ್ದಲ್ಲದೆ ಅವರ ಹುದ್ದೆಯನ್ನ ಕೂಡ ಅಚ್ಚು ಹೊಡೆಸಿದ್ದ.. ಅದರಲ್ಲೂ ಮತ್ತೊಂದು ಕಡೆ ಪ್ರೆಸ್ ಅಂತಾ ಬೇರೆ ಸ್ಟಿಕ್ಕರ್.. ಇಷ್ಟೆಲ್ಲಾ ಅಂಟಿಸಿಕೊಂಡ್ರೆ ಏನಾಯ್ತು ಅಂದ್ಕೋತ್ತಿದೀರಾ.. ಕೇವಲ ಅಂಟಿಸಿ ಕೊಂಡಿದ್ರೆ ನಾವು ಈತನ ಬಗ್ಗೆ ಹೇಳ್ತನೇ ಇರಲಿಲ್ಲ ಬಿಡಿ…
ಹೌದು ಇಷ್ಟೆಲ್ಲಾ ಬರೆಸಿದವನು ರವಿಕಾಂತೆ ಗೌಡರ ಮೇಲಿನ ಅಭಿಮಾನಕ್ಕಾದ್ರೂ ಸಂಚಾರಿ ನಿಯಮವನ್ನ ಪಾಲಿಸ ಬೇಕಲ್ವಾ.. ಅದ್ರೆ ಈತ ಮಾಡಿದ್ದು ಸಂಚಾರಿ ನಿಯಮದ ಸಂಪೂರ್ಣ ಉಲ್ಲಂಘನೆ.. ರವಿಕಾಂತೆ ಗೌಡರ ಹೆಸರು ಗಾಡಿ ಮೇಲಿದೆ ಅಂತಾ ಹೆಲ್ಮೆಟ್ ಹಾಕಿದ್ದಲ್ಲ, ಸಿಗ್ನಲ್ ಫಾಲೋ ಮಾಡಿದ್ದಲ್ಲ. ಓನ್ ವೇ ಬಗ್ಗೆ ತಲೆಕೆಡಿಸಿ ಕೊಳ್ಳದೆ ತನಗಿಷ್ಟ ಬಂದಂತೆ ಗಾಡಿ ನುಗ್ಗಿಸಿದ್ದೆ ನುಗ್ಗಿಸಿದ್ದು. ಈತನ ಗಾಡಿ ನಂಬರ್ ಕೆಎ 05 ಜೆಸ್ 2851 ಈ ಗಾಡಿಯ ಮೇಲೆ ಬಿದ್ದ ಫೈನ್ ಎಷ್ಟು ಗೊತ್ತಾ?
ಈ ಗಿರೀಶ್ ಬಾಬು ಒಂದಲ್ಲ ಎರಡಲ್ಲ 42 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ.ಈತನ ಬೈಕ್ ಮೇಲೆ ಬರೋಬ್ಬರಿ 20,200 ರೂ.ದಂಡವಿದೆ. ಅಷ್ಟೇ ಅಲ್ಲದೆ ಅ ಬೈಕ್ ಈತನ ಹೆಸರಲ್ಲೂ ಕೂಡ ಇಲ್ಲ ಅವರ ಸ್ನೇಹಿತ ಪರಮೇಶ್ವರ್ ಹೆಸರಲ್ಲಿದೆ. ಅದನ್ನ ಇತ ಖರೀದಿಸಿದ್ದ ಅದರೆ ತನ್ನ ಹೆಸರಿಗೂ ವರ್ಗಾವಣೆ ಮಾಡಿಕೊಂಡಿರಲಿಲ್ಲ. ಈ ಸುದ್ದಿ ಸಂಚಾರಿ ಆಯುಕ್ತರ ಕಿವಿಗೆ ಬೀಳ್ತಿದ್ದಂತೆ ಗಾಡಿ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ.. ತಕ್ಷಣವೇ ಗಾಡಿಯನ್ನ ಸೀಜ್ ಮಾಡಿದ ಜಯನಗರ ಟ್ರಾಫಿಕ್ ಪೊಲೀಸರು ಗಿರೀಶ್ ಬಾಬುನನ್ನ ಠಾಣೆಗೆ ಕರೆತಂದಿದ್ದಾರೆ..ಇಲ್ಲೂ ಡ್ರಾಮ ಶುರುಮಾಡಿಕೊಂಡ ಆಸಾಮಿ.ಕೊರೊನಾ ಟೈಮ್ ನಲ್ಲಿ ದುಡ್ಡಿಲ್ಲ ಫೈನ್ ಕಟ್ಟೋಕೆ ಟೈಂ ಬೇಕು ಅಂತಾ ಕೇಳಿಕೊಂಡು ಹೋಗಿದ್ದಾನೆ. ಇನ್ನೂ ರವಿಕಾಂತೇಗೌಡರ ಹೆಸರಿದ್ದ ಕಡೆಯೆಲ್ಲ ಟ್ರಾಫಿಕ್ ಪೊಲೀಸರು ಬಣ್ಣ ಬಳಿದಿದ್ದಾರೆ.
ಸದ್ಯ ಗಿರೀಶ್ ಬಾಬುನನ್ನ ಕ್ಲಾಸ್ ತೆಗೆದುಕೊಂಡಿರೊ ಜಯನಗರ ಸಂಚಾರ ಠಾಣೆ ಪೊಲೀಸರು ರವಿಕಾಂತೇಗೌಡರ ಫ್ಯಾನ್ ಆದರೆ ,ಕೈ ಮೇಲೆ ಹಾಕಿಸಿಕೊಳ್ಳಿ, ಬೈಕ್ ಮೇಲೆ ಹಾಕಿಸಿಕೊಂಡ ಮೇಲೆ ಸರಿಯಾಗಿ ಸಂಚಾರಿ ನಿಯಮ ಪಾಲಿಸಿ ನಮಗೇನು ಅಭ್ಯಂತರ ಇಲ್ಲ. ಈ ರೀತಿ ಸಂಚಾರಿ ನಿಯಮ ಉಲ್ಲಂಘನೆ ಅವರ ಹೆಸರು ಹಾಕಿಕೊಂಡ್ರೆ ಏನು ಪ್ರಯೋಜನ. ಟ್ರಾಫಿಕ್ ಫೈನ್ ಕಟ್ಟಿ ನಂತರ ಬಂದು ಗಾಡಿ ತೆಗೆದುಕೊಂಡು ಹೋಗಿ ಅಂತಾ ಕಳಿಸಿಕೊಟ್ಟಿದ್ದಾರೆ.