ಸ್ಪಿನ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭದ ಹೊರತಾಗಿಯೂ ಆಘಾತಕ್ಕೆ ಒಳಗಾಗಿದೆ.
ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಅಂತಿಮ ದಿನವಾದ ಸೋಮವಾರ ವಿಕೆಟ್ ನಷ್ಟವಿಲ್ಲದೇ 77 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಭೋಜನ ವಿರಾಮದ ನಂತರ 150 ರನ್ ಗೆ 6 ವಿಕೆಟ್ ಕಳೆದುಕೊಂಡಿದೆ.
ಗೆಲ್ಲಲು 358 ರನ್ ಗಳ ಕಠಿಣ ಗುರಿ ಪಡೆದಿರುವ ಇಂಗ್ಲೆಂಡ್ ಎರಡು ಅವಧಿಯ ಆಟದಲ್ಲಿ ಉಳಿದ 6 ವಿಕೆಟ್ ಗಳಿಂದ 218 ರನ್ ಗಳಿಸಬೇಕಾದ ಕಠಿಣ ಸವಾಲು ಪಡೆದಿದ್ದು, ಪಂದ್ಯ ಡ್ರಾ ಮಾಡಿಕೊಳ್ಳಬೇಕಲು ಹೋರಾಟ ನಡೆಸಬೇಕಾದ ಪರಿಸ್ಥಿತಿಗೆ ಸಿಲುಕಿದೆ.
ಭಾರತದ ಪರ ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಬುಮ್ರಾ ಮತ್ತು ಶಾರ್ದೂಲ್ ತಲಾ 1 ವಿಕೆಟ್ ಗಳಿಸಿದರು. ಇಂಗ್ಲೆಂಡ್ ಪರ ಆರಂಭಿಕರಾದ ರಾರಿ ಬರ್ನ್ಸ್ (50) ಮತ್ತು ಹಸೀಬ್ ಹಮೀದ್ (63) 100 ರನ್ ಜೊತೆಯಾಟ ನಿಭಾಯಿಸುತ್ತಿದ್ದಂತೆ ಬೇರ್ಪಟ್ಟರು.