ಅತಿಯಾದ ವಾಂತಿ ಭೇದಿಯಿಂದ ರಾಯಚೂರು (Raichur) ನಗರದ ಯರಗೇರಾ ಲೇಔಟ್ ನಿವಾಸಿ ಜನಕರಾಜ (Janakaraj) ರಿಮ್ಸ್ ಆಸ್ಪತ್ರೆಯಲ್ಲಿ (Rims hospital) ಮೃತಪಟ್ಟಿದ್ದಾನೆ, ಕಲುಷಿತ ನೀರಿನಿಂದಲೇ ಮೃತಪಟ್ಟಿದ್ದಾನೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.
ನಗರದ ಯರಗೇರಾ ಲೇಔಟ್ ನಿವಾಸಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಉಪನ್ಯಾಸಕ ಜನಕರಾಜ (50) ಮೃತವಾದ ದುರ್ದೈವಿಯಾಗಿದ್ದಾನೆ. ಮೃತನು ಕಳೆದ ಭಾನುವಾರದಿಂದ ನಿರಂತರ ವಾಂತಿಭೇದಿಯಿಂದ ಬಳಲುತ್ತಿದ್ದ. ಮನೆಯಲ್ಲಿ ಮಗ ಮತ್ತು ತಾಯಿ ಮಾತ್ರ ವಾಸವಾಗಿದ್ದರು. ಘಟನೆಯನ್ನು ಗಮನಿಸಿ ಪಕ್ಕದ ಮನೆಯವರು ಆಂಬುಲೆನ್ಸ್ ಮೂಲಕ ಸೋಮವಾರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ರಿಮ್ಸ್ ಆಸ್ಪತ್ರೆ ವೈದ್ಯರು ಪ್ರತಿಕ್ರಿಯಿಸಿ ಮೃತ ಜನಕರಾಜ ಸ್ಟ್ರೋಕ್ ಆಗಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದರೇ ತಾಯಿ ಮಾತ್ರ ಕಲುಷಿತ ನೀರು ಕುಡಿದೆ ನನ್ನ ಮಗ ಮೃತಪಟ್ಟಿದ್ದಾನೆ ಎಂದು ಆರೋಪಿಸುತ್ತಿದ್ದಾರೆ. ಒಂದುವೇಳೆ ಕಲುಷಿತ ನೀರಿನಿಂದಲೇ ಮೃತಪಟ್ಟಿದ್ದರೇ ನಗರದಲ್ಲಿ ಕಲುಷಿತ ನೀರಿಗೆ ಬಲಿಯಾದವರ ಸಂಖ್ಯೆ ಐದಕ್ಕೇರಲಿದೆ. ಮೇ 29 ರಿಂದ ರಿಮ್ಸ್ ಆಸ್ಪತ್ರೆಗೆ ವಾಂತಿಭೇದಿಯಿಂದ ಬಳಲುತ್ತಿದ್ದ 183 ಜನ ದಾಖಲಾಗಿದ್ದು ಅದರಲ್ಲಿ 140 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ : – ಶ್ರೀನಿವಾಸ್ ಗೌಡಗೆ ಮಾನ ಮರ್ಯಾದೆ ಇದ್ಯಾ ? – ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ