ಪ್ರಯಾಣ ಪಾಸ್ ನೀಡಿಕೆ ವಿವಾದದಲ್ಲಿ ಭಾರತದ ಪಟ್ಟಿಗೆ ಮಣಿದ ಸ್ವಿಜರ್ ಲೆಂಡ್ ಸೇರಿದಂತೆ 8 ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಗೆ ಅನುಮತಿ ನೀಡಿವೆ.
ಪುಣೆಯ ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ದೇಶ ಪ್ರವೇಶಿಸಲು 8 ರಾಷ್ಟ್ರಗಳು ಅನುಮತಿ ನೀಡಿವೆ. ಸ್ವಿಜರ್ ಲೆಂಡ್, ಐಸ್ ಲ್ಯಾಂಡ್, ಆಸ್ಟ್ರಿಯಾ, ಜರ್ಮನಿ, ಸ್ಲೊವೆನಿಯಾ, ಗ್ರೀಸ್, ಸ್ಪೇನ್ ದೇಶಗಳು ಕೋವಿಶೀಲ್ಡ್ ಗೆ ಅನುಮತಿ ನೀಡಿದ್ದಕ್ಕಾಗಿ ಘೋಷಿಸಿವೆ. ಈ ಮೂಲಕ ಭಾರತಕ್ಕೆ ನೈತಿಕ ಜಯ ಲಭಿಸಿದಂತಾಗಿದೆ.
ಇಸ್ತೋನಿಯಾ ದೇಶ ಭಾರತ ಸರಕಾರ ಸಮ್ಮತಿಸಿದ ಎಲ್ಲಾ ಲಸಿಕೆಗಳಿಗೆ ಪರಿಗಣಿಸುವುದಾಗಿ ಪ್ರಕಟಿಸಿದೆ. ಇದಕ್ಕೂ ಮುನ್ನ ಭಾರತ ಅನುಮತಿ ನೀಡಿದ ಲಸಿಕೆಗಳನ್ನು ಪಡೆದ ಪ್ರಯಾಣಿಕರಿಗೆ ನಮ್ಮ ದೇಶದಲ್ಲಿ ಮಾನ್ಯತೆ ಇಲ್ಲ. ಹಾಗಾಗಿ ಭಾರತದಿಂದ ಬಂದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗುವುದು ಕಡ್ಡಾಯ ಎಂದು ಹೇಳಿತ್ತು.