ಕೋವಿಡ್‌ನಿಂದ ಸಂಕಷ್ಟಕ್ಕೀಡಾದವರಿಗೆ ನೆರವು ನೀಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ನೋಡಲು ಅಭಿಮಾನಿಯೊಬ್ಬ 700 ಕಿ.ಮೀ ಬರಿಗಾಲಿನಲ್ಲಿಯೇ ಕ್ರಮಿಸಿ ಅಚ್ಚರಿ ಮೂಡಿಸಿದ್ದಾನೆ.
ಹೈದ್ರಾಬಾದ್ ಮೂಲದ ವೆಂಕಟೇಶ್ ಎಂಬ ಯುವಕ ಮುಂಬೈವರೆಗೆ ಬರೋಬ್ಬರಿ 700 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ.
ಈತನ ಅಭಿಮಾನ ಕಂಡು ಬಾಲಿವುಡ್ ನಟ ಸೋನು ಸೂದ್ ಖುಷಿ ಆಗಿದ್ದಾರೆ. ಹಾಗೆ ಬೇರೆ ಯಾರೂ ಹೀಗೆ ಮಾಡಬೇಡಿ ಎಂದು ತಮ್ಮ ಅಭಿಮಾನಿಗೆ ಬುದ್ಧಿಮಾತು ಹೇಳಿದ್ದಾರೆ.