ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜೊತೆ ವಕೀಲೆ ಜಗಳವಾಡಿರುವ ಘಟನೆ ಬಾಗಲಕೋಟೆಯ ಜಿಲ್ಲೆಯ ವಿನಾಯಕ ನಗರದಲ್ಲಿ ನಡೆದಿದೆ.
ಮಾಂತೇಶ್ ಚೋಳಚಗುಡ್ಡ ಎಂಬ ವ್ಯಕ್ತಿ ವಕೀಲೆ ಸಂಗೀತ ಶಿಕ್ಕೇರಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳದಲ್ಲಿ ವಕೀಲೆ , ಕುಟುಂಬಸ್ಥರು ಹಾಗೂ ಇನ್ನೋರ್ವ ವ್ಯಕ್ತಿ ಮಧ್ಯೆ ಮಾರಾಮಾರಿ ನಡೆದಿದೆ. ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಗಾಯಾಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ : – ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದ್ರೂ ಸಂಘಟನೆಗೆ ಬರಬಹುದು – ಎಂಎಲ್ಸಿ ರಾಜೇಂದ್ರ