ದಾವಣಗೆರೆ : ತಾಯಿಯೊಬ್ಬಳು ತನ್ನ ಐದು ವರ್ಷದ ಮಗನನ್ನು ಎತ್ತಿಕೊಂಡು ಬರೋಬ್ಬರಿ 90 ಕಿಲೋಮೀಟರ್ ನಡೆದು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದ ನಾಗರತ್ನ ಎಂಬ ಮಹಿಳೆ ಮಗನ ಜೊತೆ ಮನೆ ಬಿಟ್ಟಿದ್ದಾರೆ.
ಮಗನನ್ನು ಎತ್ತಿಕೊಂಡು, ತಲೆಮೇಲೆ ಗಂಟು ಹೊತ್ತು 90 ಕಿಲೋಮೀಟರ್ ನಡೆದು ಕಳೆದ ರಾತ್ರಿ 9-30 ರ ಸುಮಾರಿಗೆ ದಾವಣಗೆರೆ ತಲುಪಿದ್ದಾರೆ. ಎಸ್ ಎಸ್ ಹೈಟೆಕ್ ಆಸ್ಪತ್ರೆಯ ಬಳಿ ಪೊಲೀಸರು ತಾಯಿ ಮಗುವನ್ನು ತಪಾಸಣೆ ನಡೆಸಿದ್ದಾರೆ.
ತಪಾಸಣೆ ನಡೆಸಿದ ಬಳಿಕ ವಿಷಯ ತಿಳಿದು ಕಾರ್ಯನಿರ್ವಹಿಸುತ್ತಿದ್ದ ಪೋಲಿಸರು ತಮ್ಮ ವಾಹನದಲ್ಲಿ ತಾಯಿ ಮಗುವನ್ನು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆಯಲ್ಲಿರುವ ಅಕ್ಕನ ಮನೆಗೆ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ.