ಯಾದಗಿರಿ: ಸೂರ್ಯ ಚಂದ್ರ ಎಷ್ಟು ಸತ್ಯವೋ ಕೋಲಿ ಸಮಾಜ ಎಸ್ ಟಿಗೆ ಸೇರೋದು ಅಷ್ಟೇ ಸತ್ಯ ಎಂದು ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರಚೌಡಯ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ 2021-22 ಬಜೆಟ್ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕೋಲಿ ಸಮಾಜ ಎಸ್ ಟಿ ಸೇರುವ ವರೆಗೂ ನಾನು ಸುಮ್ಮನಿರಲ್ಲ ಎಂದು ತಿಳಿಸಿದರು.
ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೆ ಪ್ರಸ್ತಾವನೆ ಹೋಗಿದೆ. ಆದರೆ, ಈಗ ನಾವು ಪಾದಯಾತ್ರೆ ಮಾಡಲ್ಲ, ಧರಣಿ ಮಾಡಲ್ಲ, ನಮಗೆ ಈಗಾಗಲೇ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ವಿಚಾರವಾಗಿ ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ್ ಜೋಶಿ, ಸದಾನಂದ ಗೌಡ ಸೇರಿದಂತೆ ಇನ್ನಿತರ ನಾಯಕರನ್ನು ಭೇಟಿ ಮಾಡಿದ್ದೇನೆ.ಕೋಲಿ ಸಮಾಜ ಎಸ್ಟಿ ಮೀಸಲಾತಿಗೆ ಸೇರುವ ಸಮಯ ಹತ್ತಿರ ಬಂದಿದೆ. ಕೋಲಿ ಸಮಾಜ ಎಸ್ ಟಿ ಗೆ ಸೇರಿಸುವ ಸಲುವಾಗಿ ಮತ್ತೊಮ್ಮೆ ಶೀಘ್ರದಲ್ಲೇ ದೆಹಲಿಯಲ್ಲಿ ಕ್ಯಾಂಪ್ ಹಾಕ್ತೀನಿ ಎಂದು ಹೇಳಿದರು.
ಮತ್ತೊಂದು ಕಡೆ ವಾಲ್ಮಿಕಿ ಸಮುದಾಯದ ನಾಯಕರು 7.5% ಮೀಸಲಾತಿ ಬೇಕೆ ಬೇಕು ಎಂದು ಪಟ್ಟು ಹಿಡಿದಿದೆ.. ಇಷ್ಟೇಲ್ಲದರ ಮಧ್ಯೆ ಮಾಜಿ ಶಾಸಕ ಬಾಬುರಾವ್ ಚಿಂಚನಸೂರ್ ಕೂಲಿ ಸಮಾಜ ಎಸ್ಟಿಗೆ ಸೇರುವ ಸಮಯ ಹತ್ತಿರ ಬಂದಿದೆ ಎಂದು ಹೇಳಿದ್ದು ಸಂಚಲನ ಮೂಡಿಸಿದೆ.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ ನಾಯ್ಕಲ್ ಹಾಗೂ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಲಲಿತಾ ಇದ್ದರು.