ಎಂ.ಜಿ ರಸ್ತೆ (mg.road ) ಮತ್ತು ಟ್ರಿನಿಟಿ (trinity )ಮೆಟ್ರೋ (Metro ) ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ನಾಳೆ ರಾತ್ರಿ 9.30 ರಿಂದ ನಮ್ಮ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ.
ಈ ವೇಳೆ ಮೆಟ್ರೋ ಸೇವೆ ಎಂ.ಜಿ ರಸ್ತೆ (M.G. Road ) ಮತ್ತು ಕೆಂಗೇರಿ (Kengeri ) ಮೆಟ್ರೋ ನಿಲ್ದಾಣದ ನಡುವೆ ಮಾತ್ರ ಲಭ್ಯವಿರಲಿದೆ. ನಾಳೆ ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ( Baiyappanahalli ) ಕಡೆಗೆ ಕೊನೆಯ ರೈಲು 8.40 ಕ್ಕೆ ಹೊರಡಲಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 9.10ಕ್ಕೆ ಕೊನೆಯ ಮೆಟ್ರೋ ಸಂಚಾರವಿರಲಿದೆ. ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಿಲ್ಲ. ಭಾನುವಾರದಂದು ಎಂದಿನಂತೆ ಮೆಟ್ರೋ ಸಂಚಾರವಿರಲಿದೆ ಎಂದು ಬಿಎಂಆರ್ ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ : – ಡಿ ಕೆ ಶಿವಕುಮಾರ್ ಅವರನ್ನ ಬಿಜೆಪಿಗೆ ಯಾರು ಕರೆದಿದ್ದಾರೆ.. ದೂರವಾಣಿ ಮೂಲಕ ಕರೆದಿದ್ದಾರಾ ? ಮುನಿರತ್ನ ಪ್ರಶ್ನೆ