ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಎಂದೇ ಗುರುತಿಸಿಕೊಂಡಿರುವ ಉದ್ಯಮಿ ಗೌತಮ್ ಅದಾನಿ ಕುಟುಂಬದ ಪಾಲುದಾರಿಕೆಯ ಕಂಪನಿಗಳ 3 ವಿದೇಶೀ ಬಂಡಾವಳ ನಿಧಿಯ ಖಾತೆಗಳನ್ನು ರಾಷ್ಟ್ರೀಯ ಭದ್ರತಾ ಠೇವಣಿ ಲಿಮಿಟೆಡ್ ಸ್ಥಗಿತಗೊಳಿಸಿದೆ. ಇದರ ಒಟ್ಟು ಮೌಲ್ಯ 43,500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಅಲ್ಬುಲಾ ಇನ್ವೆಸ್ಟ್ ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಸ್ ಇನ್ ವೆಸ್ಟ್ ಮೆಂಟ್ ಫಂಡ್ ಚಟುವಟಿಕೆಯನ್ನು ಎನ್ ಎಸ್ ಡಿಎಲ್ ಸ್ಥಗಿತಗೊಳಿಸಿದೆ. ಅಂದರೆ ಈ ಕಂಪನಿಗಳಿಂದ ಯಾವುದೇ ಹಣ ಯಾವುದೇ ಕಂಪನಿಗೆ ವರ್ಗಾವಣೆ ಮಾಡುವಂತಿಲ್ಲ.
ಅದಾನಿ ಕಂಪನಿ ಷೇರು ಮಾರುಕಟ್ಟೆಯ ಮೇಲೆ ಕಾನೂನು ಬಾಹಿರವಾಗಿ ಪ್ರಭಾವ ಬೀರುತ್ತಿದೆ ಎಂದು ಕಳೆದ ವರ್ಷ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎನ್ ಎಸ್ ಡಿಎಲ್ ಅದಾನಿ ಷೇರು ಹೊಂದಿರುವ 3 ಕಂಪನಿಗಳ ಚಟುವಟಿಕೆಯನ್ನು ನಿರ್ಬಂಧಿಸಿದೆ.