ಸೂಪರ್ ಮಾರ್ಕೆಟ್ ನಲ್ಲಿನ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಎಸಿಪಿ ಅನುಷಾ ಮೇಲೆ ಅಂಗಡಿ ಮಾಲೀಕನೊಬ್ಬ ಸೀಮೆಎಣ್ಣೆ ಎರಚಿ ದಾಳಿ ನಡೆಸಿದ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.
ಗುರುವಾರ ಪಾಲಿಕೆಯ ಅಧಿಕಾರಿಗಳು ಸೂಪರ್ ಮಾರ್ಕೆಟ್ ನಲ್ಲಿನ ಅಂಗಡಿಗಳನ್ನು ತೆರವುಗೊಳಿಸುವ ಸಲುವಾಗಿ ಹೋದ ಸಂದರ್ಭದಲ್ಲಿ ಭದ್ರತೆಯ ದೃಷ್ಟಿಯಿಂದ ಎಸಿಪಿ ಅನುಷಾ ಕೂಡಾ ಹೋಗಿದ್ದರು.
ಈ ಸಂದರ್ಭದಲ್ಲಿ ಎಂ ಎಂ ಚೌಧರಿ ಎಂಬಾತ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಆಗ ಇದನ್ನು ತಡೆಯಲು ಹೋದ ಎಸಿಪಿ ಅನುಷಾ ಮೇಲೆ ಕೂಡಾ ಸೀಮೆಎಣ್ಣೆ ಎರಚಿದ್ದಾನೆ. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿಯ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ.