ಅತ್ಯಂತ ಕೊಳಕು ಭಾಷೆ ಕನ್ನಡ ಎಂದು ತೋರಿಸಿ ಎಡವಟ್ಟು ಮಾಡಿದ್ದ ಗೂಗಲ್ ಇದೀಗ ಕನ್ನಡದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರನ್ನು ಅಪಮಾನಿಸುವ ಮೂಲಕ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದೆ.
ವಿಕ್ರಮ್ ವೇದ ಸಿನಿಮಾ ಜೊತೆ ರಾಜ್ ಕುಮಾರ್ ಫೋಟೋ ಹಾಕಿರೋ ಗೂಗಲ್, ಡಾ. ರಾಜ್ ಕುಮಾರ್ ಗೆ Half Boil (ಅರೆ ಬೆಂದ) ಎಂದು ಉಲ್ಲೇಖಿಸಿ ಡಾ.ರಾಜ್ ಕುಮಾರ್ ಅಭಿಮಾನಿಗಳನ್ನು ಮಾತ್ರವಲ್ಲ ಕನ್ನಡಿಗರನ್ನು ಕೆರಳಿಸಿದೆ.
ಗೂಗಲ್‌ನಲ್ಲಿ ವಿಕ್ರಮ್ ವೇದ ಸಿನಿಮಾದ ಪಾತ್ರ ವರ್ಗವನ್ನ ಸರ್ಚ್ ಮಾಡಿದರೆ ಡಾ. ರಾಜ್ ಕುಮಾರ್ ಹೆಸರು ಕೂಡ ತೋರಿಸುತ್ತಿದೆ. ಹೆಸರು ತೋರಿಸಿದರೆ ತುಂಬಾ ಖುಷಿ ಏನೋ ನಿಜ. ಆದರೆ ಆ ಹೆಸರಿನ ಕೆಳಗೆ ಅರೆಬೆಂದ ಎಂಬರ್ಥದ ಪದ ಹಾಕಿ ಅಪಮಾನಿಸಿದೆ. ಗೂಗಲ್ ನಿಂದ ಇತ್ತೀಚೆಗೆ ಪದೇಪದೆ ಎಡವಟ್ಟು ಆಗುತ್ತಿದ್ದು, ಕನ್ನಡಿಗರನ್ನು ಕೆರಳಿಸುತ್ತಿದೆ.