ಹಾಸ್ಯನಟ ಕೋಮಲ್ ಕೊರೊನಾ ಸೋಂಕಿನಿದ ವಿರುದ್ಧ ಸುದೀರ್ಘ ಹೋರಾಟದಿಂದ ಪಾರಾಗಿದ್ದಾರೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಕೋಮಲ್ ಇದೀಗ ಗುಣಮುಖಿತರಾಗಿದ್ದಾರೆ.
ಕೋಮಲ್ ಸೋದರ ಹಾಗೂ ಹಿರಿಯ ನಟ ಜಗ್ಗೇಶ್ ಮಂಗಳವಾರ ಟ್ವಿಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಕೋಮಲ್ ಈಸ್ ಸೇಫ್ ಎಂದು ಸಂತಸ ಹಂಚಿಕೊಂಡಿದ್ದಾರೆ. ಕೋಮಲ್ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ತುಂಬಾ ಗಂಭೀರ ಸ್ಥಿತಿಯಲ್ಲಿದ್ದರು. ಇದೀಗ ಕೊರೊನಾ ನೆಗೆಟಿವ್ ಬಂದಿದೆ ಎಂದು ಜಗ್ಗೇಶ್ ಹೇಳಿದ್ದಾರೆ.