ತೆಲುಗು ಚಿತ್ರರಂಗದಲ್ಲಿ ರಾಜಕೀಯ ಕಾವು ಜೋರಾಗಿದೆ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್‌ಗೆ ಚುನಾವಣೆ ನಡೆಯಲಿದ್ದು, ಭಾರತೀಯ ಚಿತ್ರರಂಗದ ಖ್ಯಾತ ನಟ ಪ್ರಕಾಶ್ ರಾಜ್ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ್ತಿದ್ದಾರೆ.
ಪ್ರಕಾಶ್ ರಾಜ್, ಮೆಗಾಸ್ಟಾರ್ ಜಿರಂಜೀವಿಯನ್ನ ಬೇಟಿ ಮಾಡಿ ಬೆಂಬಲ ಕೋರಿದ್ದಾರೆ.. ಇನ್ನು ಚಿರಂಜೀವಿ ಸೇರಿದಂತೆ ಕಟುಂಬ ಸದಸ್ಯರೆಲ್ಲರೂ ಬೆಂಬಲ ಸೂಚಿಸಿದ್ದಾರೆ ಎನ್ನಲಾಗ್ತಿದೆ.
ಪ್ರಕಾಶ್ ರಾಜ್ ಎದುರು ಹಿರಿಯ ನಟ ಮೋಹನ್ ಬಾಬು ಪುತ್ರ ವಿಷ್ಣುಮಿಂಚು ಸ್ಪರ್ಧಿಸ್ತಿದ್ದಾರೆ.. ಇದು ತೆಲುಗು ಚಿತ್ರರಂಗದಲ್ಲಿಯೇ ಪ್ರತಿಷ್ಠೆಯ ಚುನಾವಣೆ ಆಗಿದ್ದು, ಪ್ರಕಾಶ್ ರಾಜ್‌ಗೆ ಗೆಲುವು ಸಿಗುತ್ತಾ ಅನ್ನೋ ಪ್ರಶ್ನೆ ಅವರ ಅಭಿಮಾನಿಗಳದ್ದು.