ವಿಜಯಪುರ: ಯುಗಾದಿ ಹೊತ್ತಿಗೆ ಉತ್ತರ ಕರ್ನಾಟಕದವೇ ಮುಖ್ಯಮಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಸುಳಿವು ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನಾವು ಇನ್ನು ಮುಂದೇ ಸಚಿವ ಸ್ಥಾನ ಕೊಡಿ ಎಂದು ಬೇಡುವುದಿಲ್ಲ. ಸಚಿವ ಸ್ಥಾನ ಕೊಡುವವರೇ ಉತ್ತರ ಕರ್ನಾಟಕದವೇ ಮುಖ್ಯಮಂತ್ರಿ ಆಗಲಿದ್ದಾರೆ.
ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯೆ ನೀಡಿದ ಅವರು,ಈ ವಿಚಾರದಲ್ಲಿ ಕೂಡಲ ಸಂಗಮ ಮತ್ತು ಹರಿಹರ ಪೀಠದ ಇಬ್ಬರೂ ಸ್ವಾಮೀಜಿ ಕೂಡಿದ್ದು ಒಳ್ಳೆಯ ಬೆಳವಣಿಗೆ. ಇಬ್ಬರೂ ಸಮಾಜದ ಹಿತದೃಷ್ಠಿಯಿಂದ ಕೆಲಸ ಮಾಡಲಿ. ಯಾರೋ ಅನುದಾನ ಕೊಡ್ತಾರೆ ಅಂತ ಕೆಲಸ ಮಾಡುವುದು ಬೇಡ. ಸರಕಾರದ ಅನುದಾನ ಆಸೆಯಿಂದ ಕೆಲಸ ಮಾಡುವುದು ಬೇಡ ಎಂದರು.