ವ್ಯಕ್ತಿಯೊಬ್ಬನ ದೇಹವನ್ನು ಅಮೆರಿಕದ ಹೆಲಿಕಾಫ್ಟರ್ ವೊಂದಕ್ಕೆ ನೇತುಹಾಕಿ ಆಫ್ಘಾನಿಸ್ತಾನದ ವಿಮಾನ ನಿಲ್ದಾಣ ಬಳಿ ತಾಬಿಬಾನಿಗಳು ಹಾರಾಟ ನಡೆಸಿ ವಿಕೃತಿ ಮೆರೆದಿದ್ದಾರೆ.
ಕಾಬೂಲ್ ನಿಂದ ಅಮೆರಿಕಾ ಸೇನೆ ಜಾಗ ಖಾಲಿ ಮಾಡುತ್ತಿದ್ದಂತೆ ತಾಲಿಬಾನಿಗಳು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾಗಿ ಘೋಷಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಂದಹಾರ್ ನಲ್ಲಿ ತಾಲಿಬಾನಿಗಳ ವಿಕೃತಿ ಮೆರೆ ಮೀರಿದೆ.
ಹೆಲಿಕಾಪ್ಟರ್ ಮೂಲಕ ತಾಲಿಬಾನಿಗಳು ಗಸ್ತು ತಿರುಗುತ್ತಿದ್ದು, ವೀಡಿಯೋದಲ್ಲಿ ಹೆಲಿಕಾಪ್ಟರ್ ಗೆ ದೇಹವೊಂದನ್ನು ನೇತು ಹಾಕಿರುವುದು ಪತ್ತೆಯಾಗಿದೆ. ಅಲ್ಲಿನ ಕೆಲ ಮಾಧ್ಯಮಗಳು ತಮ್ಮ ವಿರುದ್ಧ ಹಾಗೂ ಅಮೆರಿಕಾ ಸೇನೆ ಪರ ಕೆಲಸ ಮಾಡಿದ್ದವರನ್ನು ಹುಡುಕಿ ಹುಡುಕಿ ಅವರಿಗೆ ಉಗ್ರ ಶಿಕ್ಷೆಗಳನ್ನು ನೀಡುತ್ತಿದೆ.
ಇನ್ನು ಅಮೆರಿಕಾ ಸೇನೆ ತೆರಳುತ್ತಿದ್ದಂತೆ ಅಮೆರಿಕಾ ಸೇನೆಗೆ ಭಾಷಾಂತರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆಗಸದಲ್ಲಿ ಹೆಲಿಕಾಫ್ಟರ್ ಗೆ ನೇಣು ಬಿಗಿದು ದುಷ್ಕೃತ್ಯ ಎಸಗಿದೆ ಎಂದು ವರದಿಯಾಗಿದೆ.