ಮೂರು ವರ್ಷದ ಮಗುವೊಂದುದು 150 ಅಡಿ ಆಳದ ತೆರೆದ ಬೋರ್ ವೆಲ್ ಒಳಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿಯ ಧರಿಯಾ ಗ್ರಾಮದಲ್ಲಿ ಸಂಭವಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ.
ಆಗ್ರಾದ ಗ್ರಾಮೀಣ ಪ್ರದೇಶವಾದ ಫತೇಹಬಾದ್ ಜಿಲ್ಲೆಯ ಧರಿಯಾ ಗ್ರಾಮದ ನಿಭೋಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ 8.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಮಗು ತೆರೆದ ಬೋರ್ ವೇಲ್ ಒಳಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಪರಿಹಾರ ಕಾರ್ಯ ಆರಂಭಿಸಿದ್ದು, ತಂದೆ ಚೋಟೆಲಾಲ್ ನೀರಿಗಾಗಿ ಈ ಬಾವಿ ಕೊರೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮೇಲಿನಿಂದ ಹಗ್ಗ ಹರಿಯಬಿಡಲಾಗಿದ್ದು, ಹಗ್ಗವನ್ನು ಹಿಡಿದಿರುವ ಮಗು ಪ್ರತಿಕ್ರಿಯೆ ನೀಡುತ್ತಿದೆ. ಮಗು ಸುರಕ್ಷಿತವಾಗಿ ಮೇಲೆ ಬರಲಿ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.