ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಿನ್ನೆಯಿಂದ 13ನೇ ಆವೃತ್ತಿಯ ಏರೋ ಇಂಡಿಯಾ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಸದ ತೇಜಸ್ವಿ ಸೂರ್ಯ ತೇಜಸ್ ಯುದ್ಧವಿಮಾನವೇರಿ ಹಾರಾಟ ನಡೆಸಿದ್ದಾರೆ.

15 ಸಾವಿರ ಅಡಿಗಳ ಎತ್ತರದಲ್ಲಿ 1 ಸಾವಿರ ಕಿ.ಮೀ. ವೇಗದಲ್ಲಿ ತೇಜಸ್ವಿ ಸೂರ್ಯ ಹಾರಾಟ ನಡೆಸಿದ್ದಾರೆ. ಈ ಯುದ್ಧವಿಮಾನ ಭಾರತದಲ್ಲಿ ನಿರ್ಮಾಣವಾಗಿದೆ. ಇದು ನಮ್ಮೆಲ್ಲರ ಹೆಮ್ಮೆ. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ವಿಶೇಷ ಅನುಭವವಿದು.

ನನ್ನನ್ನು ಸುರಕ್ಷಿತವಾಗಿ ಹಾರಾಡಿಸಿದ ಪೈಲಟ್ ಅವರಿಗೆ ಧನ್ಯವಾದ. ಇನ್ನು, ಭೂಮಿಯಿಂದ ಮೇಲಕ್ಕೆ ಹೋದಂತೆಲ್ಲ ಉಸಿರಾಡಲೂ ಕಷ್ಟವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಶತ್ರುಗಳೊಂದಿಗೆ ಕಾದಾಡುವುದು ನಿಜಕ್ಕೂ ಸವಾಲಿನ ಕೆಲಸ. ಹೀಗಾಗಿ ನಮ್ಮ ಪೈಲಟ್ ಗಳಿಗೆಲ್ಲ ಸಲಾಂ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.