ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ನಿಧನರಾಗಿದ್ದಾರೆ.
ತಾಯಿ ಅನಾರೋಗ್ಯಕ್ಕೀಡಾದ ಬೆನ್ನಲ್ಲೇ ಬ್ರಿಟನ್ ನಲ್ಲಿ ಸಿಂಡ್ರೆಲಾ ಚಿತ್ರದ ಶೂಟಿಂಗ್ ಮೊಟಕುಗೊಳಿಸಿ ಅಕ್ಷಯ್ ಕುಮಾರ್ ಮುಂಬೈಗೆ ಮರಳಿದ್ದರು. ಅರುಣಾ ಭಾಟಿಯಾ ಅವರನ್ನು ಸೆಪ್ಟೆಂಬರ್ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಕ್ಷಯ್ ಕುಮಾರ್ ಟ್ವಿಟರ್ ನಲ್ಲಿ ತಾಯಿ ನಿಧನ ಸುದ್ದಿಯನ್ನು ಹಂಚಿಕೊಂಡಿದ್ದು, ನನ್ನ ಆತ್ಮವಾಗಿದ್ದ ತಾಯಿ ಇಲ್ಲದೇ ಉಸಿರಾಡಲು ಆಗದಷ್ಟು ನೋವಾಗುತ್ತಿದೆ. ಆಕೆ ಬೇರೊಂದು ಲೋಕದಲ್ಲಿರುವ ತಂದೆಯನ್ನು ಸೇರಿಕೊಂಡಿದ್ದಾರೆ. ಅವರಿಗಾಗಿ ಪ್ರಾರ್ಥಿಸಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.