ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಗೆ ಅಭಿನಂದನೆ ಸಲ್ಲಿಸಿರುವ ಅಲ್ ಖೈದಾ ಉಗ್ರ ಸಂಘಟನೆ, ಇಸ್ಲಾಮ್ ವಿರೋಧಿಗಳ ಕೈಯಿಂದ ಕಾಶ್ಮೀರವನ್ನು ಕೂಡ ಬಿಡುಗಡೆ ಮಾಡಬೇಕಿದೆ ಎಂದು ಕರೆ ನೀಡಿದೆ.
ಆಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಪಡೆದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಅಲ್ ಖೈದಾ, ಇಸ್ಲಾಮ್ ಭೂಮಿಯನ್ನು ಕಸಿದುಕೊಂಡಿರು ಕಾಶ್ಮೀರ, ಲಿಬಿಯಾ, ಸೊಮಾಲಿಯಾ, ಯೆಮೆನ್ ಗಳಿಗೆ ಸ್ವತಂತ್ರ ದೊರಕಿಸಿಕೊಡಬೇಕಾಗಿದೆ. ಜಗತ್ತಿನಾದ್ಯಂತ ಮುಸ್ಲಿಮರ ಸ್ವಾತಂತ್ರ್ಯಕ್ಕೆ ಶಕ್ತಿ ಕೊಡು ಎಂದು ಹೇಳಿದೆ.