ಅಮೆರಿಕಾದ ಅಧ್ಯಕ್ಷ ಬೈಡನ್ ಗೆ ತಲೆನೋವಾದ ಕಮಲಾ ಸೊಸೆ ಮೀನಾಕ್ಷಿ

ವಾಷಿಂಗ್ಟನ್: ಕೇಂದ್ರ ಸರಕಾರದ ಕೃಷಿ ಕಾಯಿದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಸರಣಿ ಟ್ವೀಟ್‌ಗಳನ್ನು ಮುಂದುವರೆಸಿರುವ ಮೀನಾಕ್ಷಿ ಹ್ಯಾರಿಸ್ ಅವರು ಬೈಡನ್ – ಕಮಲಾ ಸರಕಾರಕ್ಕೆ ಹೊಸ ತಲೆನೋವು ತಂದಿದ್ದಾರೆ.
ಜೋ ಬೈಡೆನ್, ಕಮಲಾ ನೇತೃತ್ವದ ಅಮೆರಿಕನ್ ಸರಕಾರ ಭಾರತದ ಸರಕಾರದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಹೇಳಿಕೆ ನೀಡಿದರೆ, ಕಮಲಾ ಸೋಸೆ ಮೀನಾಕ್ಷಿ ಮಾತ್ರ ಅಮೆರಿಕಾ ಅಧ್ಯಕ್ಷರಿಗೂ ಮುಜುಗರವನ್ನುಂಟು ಮಾಡುವ ಮಟ್ಟಿಗೆ ಭಾರತದ ಸರಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ದಾಳಿ ಮುಂದುವರೆಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಬಗ್ಗೆ ಪಾಪ್ ತಾರೆ ರಿಹನ್ನಾ, ಸ್ವೀಡನ್‌ನ ಗ್ರೇಟಾ ಥನ್‌ಬರ್ಗ್ ಹಾಗೂ ಕಮಲಾ ಹ್ಯಾರಿಸ್ ಸೊಸೆ ಮೀನಾಕ್ಷಿ ಹ್ಯಾರಿಸ್ ಟ್ವೀಟ್‌ಗಳನ್ನು ಮಾಡಿದ್ದು ಬಹುವಾಗಿ ಚರ್ಚೆಯಾಗುತ್ತಿದ್ದು, ಸೊಸೆ ಮೀನಾಕ್ಷಿಯಿಂದ ಬೈಡನ್ ಹಾಗೂ ಕಮಲಾ ಸಹ ಮುಜುಗರಕ್ಕೆ ಒಳಗಾಗಿದ್ದಾರೆ.
ಭಾರತದ ರೈತ ಹೋರಾಟಗಳ ವಿರುದ್ಧ ನಿರಂತರ ಟ್ವೀಟ್ ಮಾಡಿ ಸುದ್ದಿಯಾಗುತ್ತಿರುವವರು ಮೀನಾಕ್ಷಿ ಹ್ಯಾರಿಸ್(36). ಒಂದೆಡೆ ಖುದ್ದು ಬೈಡೆನ್, ಕಮಲಾ ನೇತೃತ್ವದ ಅಮೆರಿಕನ್ ಸರಕಾರ ಕೇಂದ್ರದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಹೇಳಿಕೆ ನೀಡಿದರೆ, ಇನ್ನೊಂದೆಡೆ ಕಮಲಾರ ಸೊಸೆ ಮೀನಾಕ್ಷಿ ಮಾತ್ರ ಭಾರತ ಸರಕಾರದ ವಿರುದ್ಧ ಟ್ವೀಟ್ ದಾಳಿ ಮುಂದು ವರಿಸಿದ್ದಾರೆ. ತಮ್ಮ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಅವರು ರೈತರ ಪ್ರತಿಭಟನೆಗಳಿಗೆ ಧಾರ್ಮಿಕ ಆಯಾಮವನ್ನೂ ನೀಡುತ್ತಿದ್ದು, ಈ ವಿಚಾರವೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಭಾರತದ ಆಂತರಿಕ ವ್ಯವಹಾರಗಳಿಂದ ದೂರ ಇರಲು ಹೇಳಬೇಡಿ. ಇದು ಕೇವಲ ಕೃಷಿ ನೀತಿಯ ವಿಚಾರ ವಲ್ಲ, ಇದು ಧಾರ್ಮಿಕ ಅಲ್ಪಸಂಖ್ಯಾಕರ ವಿರುದ್ಧದ ಕಿರುಕುಳ. ಪೊಲೀಸ್ ಹಿಂಸೆ ಎನ್ನುವ ಮೂಲಕ ಊರಿಯೋ ಬೆಂಕಿಗೆ ತುಪ್ಪು ಸುರಿದ್ದಿದ್ದಾರೆ. ಮೀನಾಕ್ಷಿ ಅವರು ಇಂತಹ ಹೇಳಿಕೆಯಿಂದ ಅಮೆರಿಕಾದಲ್ಲಿ ಬೈಡೆನ್ ಸರಕಾರ ಮುಜುಗರಕ್ಕೆ ಒಳಗಾಗಿರುವುದು ಅಂತು ಸುಳ್ಳಲ್ಲ. ಒಟ್ಟಲ್ಲಿ ಮಹತ್ವಾಕಾಂಕ್ಷಿ ಮೀನಾಕ್ಷಿಯನ್ನು ಕಮಲಾ ಬೆಳೆಯಲು ಬಿಡುತ್ತಾರೋ ಅಥವಾ ದೂರ ಇಡುತ್ತಾರೋ ಎನ್ನುವುದೇ ಈಗಿನ ಪ್ರಶ್ನೆ.