ವಾಷಿಂಗ್ಟನ್: ಅಮೆರಿಕದಲ್ಲಿ ಮಾನವ ಮತ್ತು ಶ್ವಾನದ ಬಾಂಧವ್ಯಕ್ಕೆ ಅಪರೂಪದ ಘಟನೆ ನಡೆದಿದೆ. ಕೆಲವರು ಶ್ವಾನಗಳನ್ನು ಅತಿ ಪ್ರೀತಿಯಿಂದ ತಮ್ಮ ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಅಮೆರಿಕದ ಆಗರ್ಭ ಶ್ರೀಮಂತನೊಬ್ಬ ತನ್ನ ಮುದ್ದಿನ ಸಾಕುನಾಯಿಗೆ ತನ್ನ 5 ಮಿಲಿಯನ್ ಡಾಲರ್ (ಸುಮಾರು 36 ಕೋಟಿ ರೂ.) ಆಸ್ತಿಯನ್ನು ಬರೆದು ಕೊನೆಯುಸಿರೆಳೆದಿದ್ದಾನೆ. ಕಳೆದ 8 ವರ್ಷಗಳಿಂದ ಬಿಲ್ ಡೋರಿಸ್ ಲೂಲೂ ಎಂಬ ಶ್ವಾನವನ್ನು ಸಾಕಿದ್ದ. ಡೋರಿಸ್ ಲೂಲೂನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಎಂದು ಡೋರಿಸ್ ಸ್ನೇಹಿತರು ತಿಳಿಸಿದ್ದಾರೆ.
ಸದ್ಯ ಲೂಲೂನನ್ನು ಸ್ಥಳೀಯ ಟ್ರಸ್ಟ್ ಒಂದು ನೋಡಿಕೊಳ್ಳುತ್ತಿದೆ. ಲೂಲೂನನ್ನು ನೋಡಿಕೊಳ್ಳುವ ಟ್ರಸ್ಟ್ ಗೆ ಈ ಆಸ್ತಿ ಸೇರುತ್ತದೆ ಎಂದು ಡೋರಿಸ್ ಬರೆದಿಟ್ಟಿದ್ದರೆನ್ನಲಾಗಿದೆ. ಡೋರಿಸ್ ನಿಧನದ ನಂತರ ಲೂಲೂ ಆಹಾರವನ್ನು ಸರಿಯಾಗಿ ಸೇರಿಸುತ್ತಿಲ್ಲ. ಅದಾ ಡೋರಿಸ್ ಫೋಟೋ ಮುಂದೆ ಕುಳಿತಿರುತ್ತದೆ ಎಂದು ಲೂಲೂನನ್ನು ನೋಡಿಕೊಳ್ಳುತ್ತಿರುವ ಟ್ರಸ್ಟ್ ಹೇಳಿದೆ.
ಇನ್ನು ಈ ರೀತಿ ಶ್ವಾನದ ಹೆಸರಿಗೆ ಆಸ್ತಿ ಬರೆದ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತಮ್ಮ ಅರ್ಧ ಆಸ್ತಿಯನ್ನು ತಮ್ಮ ಸಾಕುನಾಯಿ ಜಾಕಿ ಹೆಸರಿಗೆ ಬರೆದಿದ್ದರು. ಜಾಕಿ ವಿಧೇಯತೆಯಿಂದ ನನ್ನ ಸೇವೆ ಮಾಡಿದೆ. ಹಾಗಾಗಿ ನನ್ನ ಅರ್ಧ ಆಸ್ತಿಯನ್ನು ಅದರ ಹೆಸರಿಗೆ ಬರೆದಿದ್ದೇನೆ. ಸ್ವಯಂ ನಿರ್ಧಾರದಿಂದಲೇ ಹೀಗೆ ಮಾಡಿದ್ದೇನೆ ಎಂದಿದ್ದರು. ಈ ಸುದ್ದಿ ಸಾಕಷ್ಟು ವೈರಲ್ ಆಗಿತ್ತು.