ನಟಿ ಹಾಗೂ ನಿರೂಪಕಿ ಅನುಶ್ರೀಗೆ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದೂ ಅಲ್ಲದೇ ಸಾಗಾಟದ ಹಿಂದೆಯೇ ಕೈವಾಡ ಹೊಂದಿರುವ ಬಗ್ಗೆ ಗಂಭೀರ ಆರೋಪ ಮತ್ತೆ ಕೇಳಿ ಬಂದಿದ್ದು, ಡ್ರಗ್ಸ್ ಕೇಸಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಡ್ರಗ್ಸ್ ಕೇಸಲ್ಲಿ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ವಿರುದ್ಧ ಬಿ ರಿಪೋರ್ಟ್ ಸಲ್ಲಿಕೆ ಬೆನ್ನಲ್ಲೇ ಅನುಶ್ರೀ ಈ ಹಿಂದೆ 2007ರಲ್ಲಿ ಡ್ರಗ್ಸ್ ಕೇಸಲ್ಲಿ ಹೆಸರು ಕೇಳಿ ಬಂದಿದ್ದು, ಮತ್ತೆ ಚಾಲ್ತಿಗೆ ಬಂದಿದೆ.
ಮಂಗಳೂರು ಮೂಲದ ಮಾಜಿ ಸಿಎಂ ಹಾಗೂ ಅವರ ಪುತ್ರ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಈ ಪ್ರಕರಣದ ಹಿಂದೆ ಪ್ರಭಾವ ಬೀರಿದ್ದು, ಅವರ ಕೈವಾಡವೂ ಇದರಲ್ಲಿ ಇರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ.
ಅನುಶ್ರೀ ಡ್ರಗ್ ಸೇವಿಸಿರೋದು ಮಾತ್ರ ಅಲ್ಲ, ಸಾಗಾಟ ಮಾಡಿದ್ದಾರೆ ಎಂದು ಸಿಸಿಬಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಆರೋಪಿ ನಂ 2 ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ನಮ್ಮ ರೂಂ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ಎಕ್ಸೆಟಿಸಿ (Ecstasy) ಪಿಲ್ಸ್ ಅನ್ನು ಅನುಶ್ರೀ ತಂದುಕೊಡುತ್ತಿದ್ದರು. ಅಲ್ಲದೇ ಕಿಶೋರ್ ಮತ್ತು ತರುಣ್ ಜೊತೆ ಸಾಕಷ್ಟು ಬಾರಿ ಮಾದಕ ವಸ್ತು ಸೇವಿಸಿದ್ದಾರೆ ಎಂದು ಕಿಶೋರ್ ಶೆಟ್ಟಿ ಹೇಳಿರುವುದು ಮಂಗಳೂರು ಸಿಸಿಬಿ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.