ಮಾ. 1 ರಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ನನ್ನ ಮತಕ್ಷೇತ್ರದ ಯುವಕ ಮೃತಪಟ್ಟಿದ್ದ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಯತ್ನ, ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ದಿಟ್ಟತನದಿಂದ ನವೀನ ಪಾರ್ಥೀವ ಶರೀರ ತರಲು ಯಶಸ್ವಿ ಆಗಿದೆ. ಪಾರ್ಥೀವ ಶರೀರ ತರಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದ್ದಾರೆ. 20 ದಿನಗಳ ಬಳಿಕ ಸ್ವಗ್ರಾಮಕ್ಕೆ ಮೃತ ನವೀನ್ ಪಾರ್ಥಿವ ಶರೀರ ತರಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಇರುವ ನವೀನ್ ಮನೆಯಲ್ಲಿ ಪಾರ್ಥಿವ ಶರೀರ ದರ್ಶನಕ್ಕೆ ಇರಿಸಲಾಗಿದೆ. ನವೀನ್ ಪಾರ್ಥಿವ ಶರೀರದ ದರ್ಶನಕ್ಕೆ ಜನ ಸಾಗರ ಹರಿದು ಬರುತ್ತಿದೆ.
0 82 Less than a minute