ಶಿಕ್ಷಣ ಮತ್ತು ಧರ್ಮ ಎರಡೂ ಕಣ್ಣುಗಳಿದ್ದಂತೆ. ಎರಡನ್ನೂ ಒಟ್ಟಿಗೆ ತೆಗೆದುಕೊಂಡು ನಡೆಯಬೇಕು ಅನ್ನೋದು ನಮ್ಮ ಆಶಯ ಎಂದು ಮಂಡ್ಯದಲ್ಲಿ ವಿದ್ಯಾರ್ಥಿನಿ ಮುಸ್ಕಾನ್ ತಂದೆ ಮಹಮದ್ ಹುಸೇನ್ ಖಾನ್ ಹೇಳಿದ್ದಾರೆ. ಹೈಕೋರ್ಟ್ ಆದೇಶದ ಪ್ರತಿ ಬರಲಿ. ದೊಡ್ಡವರ ಜೊತೆ ಕೂತು ಮಾತುಕತೆ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ವಿವಾದ ಹಬ್ಬಿದ ನಂತರ ಮಗಳನ್ನ ಕಾಲೇಜಿಗೆ ಕಳಿಸಿಲ್ಲ. ಇದೇ 24ಕ್ಕೆ ಆಕೆಗೆ ಎಕ್ಸಾಂ ಇದೆ. ಕಾಲೇಜು ಆಡಳಿತ ಮಂಡಳಿ ಜೊತೆ ಮಾತುಕತೆ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ನಮಗೆ ಅನುಕೂಲ ಆಗಲಿಲ್ಲ ಅಂದ್ರೆ ಸುಪ್ರೀಂಕೋರ್ಟ್ ಗೆ ಹೋಗ್ತೀವಿ ಅಂದಿದ್ದಾರೆ. ದೊಡ್ಡವರು ಏನು ನಿರ್ಧಾರ ಮಾಡ್ತಾರೆ ಅದರಂತೆ ನಡೆಯುತ್ತೇವೆ.ಗೊಂದಲ ಮಾಡಿಕೊಳ್ಳೋದು ಬೇಡ. ಒಂದು ಒಳ್ಳೆಯ ತೀರ್ಮಾನ ಆಗುತ್ತೆ. ಅದರಂತೆ ಎಲ್ಲರೂ ಒಟ್ಟಿಗೆ ನಡೆಯೋಣ ಎಂದು ಪ್ರತಿಕ್ರಿಯಿಸಿದ್ದಾರೆ.
0 86 Less than a minute