ದೀರ್ಘಕಾಲದಿಂದ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತ 42 ವರ್ಷದ ಡಿಂಕೊ ಸಿಂಗ್ ಗುರುವಾರ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದರು.
ಮಣಿಪುರ ಮೂಲದ ಮಾಜಿ ಬಾಕ್ಸರ್ 2017ರಿಂದ ಲಿವರ್ ಕ್ಯಾನ್ಸರ್ ನಿಂದ ಡಿಂಕೋ ಸಿಂಗ್ ಬಳಲುತ್ತಿದ್ದರು. ಅಲ್ಲದೇ ಕೊರೊನಾ ವೈರಸ್ ವಿರುದ್ಧವೂ ಹೋರಾಟ ನಡೆಸಿದ್ದರು.
1998ರಲ್ಲಿ ಡಿಂಕೊ ಸಿಂಗ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆಗಾಗಿ ಅದೇ ವರ್ಷ ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರೀ ಪುರುಸ್ಕಾರಕ್ಕೆ ಪಾತ್ರರಾಗಿದ್ದರು.
ಡಿಂಕೋ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ರಿಜುಜು, ಮಾಜಿ ಬಾಕ್ಸರ್ ವಿಜೇಂದರ್ ಸಿಂಗ್ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.
ಲಸಿಕೆ ಪಡೆಯಲು 50ಕ್ಕಿಂತ ಹೆಚ್ಚು ಓಟಿಟಿ ಪಡೆದ ಅಥವಾ 1000ಕ್ಕೂ ಹೆಚ್ಚು ಬಾರಿ ಸರ್ಚ್ ಮಾಡಿದ ಗ್ರಾಹಕರನ್ನು ಕೋವಿನ್ ಆ್ಯಪ್ ಸ್ವಯಂ ಆಗಿ ನಿರ್ಬಂಧಿಸಲಿದೆ.