ಗೂಗಲ್ ಪೇ, ಪೋನ್ ಪೇ, ಅಮೆಜಾನ್ ಪೇ ಮತ್ತು ಪೇಟಿಎಂನಂತಹ ಪ್ರಮುಖ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳಿಗೆ ಶೀಘ್ರದಲ್ಲೇ ಹೊಸ ಸ್ಪರ್ಧೆ ಎದುರಾಗಲಿದೆ. ಶತಮಾನದಷ್ಟು ಹಳೆಯ ಉದ್ಯಮ ಸಮೂಹ ಟಾಟಾ ಇದೀಗ ಯುಪಿಐ ಪಾವತಿ ಸೇವಾ ವಲಯವನ್ನೂ ಪ್ರವೇಶಿಸಲು ಮುಂದಾಗಿದೆ.
ಉಪ್ಪಿನಿಂದ – ಉಕ್ಕಿನವರೆಗಿನ ಬೃಹತ್ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸುತ್ತಿರುವ ಟಾಟಾ ಸನ್ಸ್ ಯುಪಿಐನಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಅನುಮತಿ ಕೇಳಿದೆ ಎನ್ನಲಾಗಿದೆ. ಟಾಟಾ ಗ್ರೂಪ್ ತನ್ನ ಡಿಜಿಟಲ್ ವಾಣಿಜ್ಯ ಘಟಕವಾದ ಟಾಟಾ ಡಿಜಿಟಲ್ ಮೂಲಕ ಯುಪಿಐ ಮೂಲಸೌಕರ್ಯಕ್ಕೆ ಶಕ್ತಿ ತುಂಬಲು ಖಾಸಗಿ ಬ್ಯಾಂಕ್ ಐಸಿಐಸಿಐನೊಂದಿಗೆ ಮಾತುಕತೆ ನಡೆಸುತ್ತಿದೆ ಎಎನ್ಎನ್ನಲಾಗಿದೆ. ಹೆಚ್ಚುವರಿ ಬ್ಯಾಂಕಿಂಗ್ ಪಾಲುದಾರಿಕೆಗಾಗಿ ಮತ್ತೊಂದು ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಜತೆಗೂ ಟಾಟಾ ಚರ್ಚೆ ನಡೆಸಿದೆ ಎಂದು ಮೂಲಗಳು ಹೇಳಿವೆ. ಯುಪಿಐ ಪೇಮೆಂಟ್ ವಲಯದಲ್ಲಿ ಫೋನ್ ಪೇ ಮತ್ತು ಗೂಗಲ್ ಪೇ ಸಿಂಹಪಾಲು ಹೊಂದಿದ್ದರೆ, ಅಮೆಜಾನ್ ಪೇ, ಪೇಟಿಎಂ ಮತ್ತು ಫೇಸ್‌ಬುಕ್ ಮಾಲಿಕತ್ವದ ವಾಟ್ಸಾಪ್ ಪೇ ಈ ಕ್ಷೇತ್ರದಲ್ಲಿರುವ ಇತರ ಪ್ರಮುಖ ಅಪ್ಲಿಕೇಶನ್‌ಗಳಾಗಿವೆ.
0 83 Less than a minute