ಅಕ್ರಮ ರಾಯಲಿಟಿ ಮುದ್ರಣದ ಮೇಲೆ ದಾಳಿ:ಆರೋಪಿಗಳ ಬಂಧನ..!

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಭರತ್ ಕುಮಾರ್, ಸಿದ್ದಲಿಂಗ ರೆಡ್ಡಿ, ಚನ್ನನಗೌಡ ಎಂಬುವವರಿಗೆ ಸೇರಿದ ಮೆಡಿಕಲ್ ಶಾಪ್ ನಲ್ಲಿ, ಅಕ್ರಮವಾಗಿ ರಾಯಲಿಟಿ ಮುದ್ರಣ ಮಾಡುತ್ತಿದ್ದ ಮೆಡಿಕಲ್ ಶಾಪ್ ಮೇಲೆ ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ರಮವಾಗಿ ಹೋರ ಜಿಲ್ಲೆಗಳ ರಾಯಲಿಟಿ ಮುದ್ರಿಸಿರುವ ಕೊಟ್ಟ, ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಸಿದ್ದಲಿಂಗ ರೆಡ್ಡಿಯನ್ನು ಬಂಧಿಸಲಾಗಿದೆ.

ಸುಮಾರು 40 ಲಕ್ಷ ರೂ. ಮೌಲ್ಯದ 307 ರಾಯಲ್ಟಿ ಪತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ರಾಜಧನ (ರಾಯಲ್ಟಿ) ದುರ್ಬಳಕೆ ಮಾಡಿಕೊಂಡು ಸರ್ಕಾರಿ ಖಜಾನೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಅಲ್ಲದೆ ಖಾಲಿ ಜಮೀನಿನ ಮರಳು ಸಾಗಣೆ ರಾಯಲ್ಟಿ ಬಳಸಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದ ಸಾಗಣಿಕೆ ಮಾಡುವ ಮೂಲಕ ವಂಚನೆ ಮಾಡಿದ್ದಾರೆ. ಈ ಅಕ್ರಮ ದಂಧೆಯಲ್ಲಿ ತೊಡಗಿದ್ದ ಶಶಿಕಾಂತ್ ಎಸ್. ವಡ್ಡರ್, ಶರಣಬಸಪ್ಪ, ಯಲ್ಲಪ್ಪ, ಎಂಎಂ ಬಳ್ಳಾರಿ ಅಕ್ರಮ ಮರಳು ಸಾಗಣಿಕೆ ಮಾಡುತ್ತಿರುವ ಗುತ್ತಿಗೆದಾರನಾಗಿದ್ದಾನೆಂದು ತಿಳಿದು ಬಂದಿದೆ. ಈ ಅಕ್ರಮದ ಕುರಿತಂತೆ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಇನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


ಅಕ್ರಮವಾಗಿ ರಾಯಲಿಟಿ ಮುದ್ರಣ ಮಾಡುತ್ತಿದ್ದ ಮೆಡಿಕಲ್ ಶಾಪ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!