ಜಮೀನಿನ ಮೇಲೆ ನೀರು ಹರಿಯುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜರುಗಿದೆ ಕೋಲಾರ ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ ಮುಲಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಾದ ಮುನಿರಾಜು, ಸೊಣ್ಣಪ್ಪ, ಅಂಜಿನಪ್ಪ ಮತ್ತು ಸಹೋದರರು ಸೇರಿ ಚಿಕ್ಕ ಹೆಂಡತಿ ಮಕ್ಕಳಾದ ಮನೋಜ್ ಮತ್ತು ಮದನ್ ಸೇರಿದಂತೆ ಮುನಿಯಾಕಲಪ್ಪ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಮನೋಜ್ ತಲೆಗೆ ತೀವ್ರವಾಗಿ ಹಲ್ಲೆಯಾಗಿದ್ದು, ನಾಲ್ಕು ಹೊಲಿಗೆಯನ್ನು ಹಾಕಲಾಗಿದೆ. ಮುನಿಯಾಕಲಪ್ಪ ದೊಡ್ಡ ಹೆಂಡತಿ ಮಕ್ಕಳಿಗೆ ನೀಡಬೇಕಾದ ಭಾಗವನ್ನು ಗ್ರಾಮದ ಹಿರಿಯರು ಸೇರಿ ನ್ಯಾಯ ಪಂಚಾಯಿತಿ ಮಾಡಿ ಭಾಗ ನೀಡಲಾಗಿತ್ತು. ಆದರೆ ಜಮೀನು ಪಕ್ಕ ಚಿಕ್ಕ ಹೆಂಡತಿ ಮಕ್ಕಳು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಏಕಾಏಕಿ ರಾಡ್ ಮೂಲಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೋಲಾರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.