ನಿಗದಿಯಂತೆ ಆಗಸ್ಟ್ 28 ಮತ್ತು 29ರಂದು ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಸಿಇಟಿಯನ್ನು ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ನೇತೃತ್ವದಲ್ಲಿ ನಡೆದ ಉನ್ನತ ಶಿಕ್ಷಣ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಪ್ರವೇಶ ಪರೀಕ್ಷೆಗೆ ಜೂನ್15 ರಿಂದ ನೋಂದಣಿ ಆರಂಭವಾಗಲಿದ್ದು, ನೀಟ್ ನಂತೆ ಕನಿಷ್ಠ ಅಂಕ ಪರಿಗಣಿಸುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.
ಮೊದಲ ದಿನ ಅಂದರೆ ಆಗಸ್ಟ್ 28ರಂದು ಗಣಿತ, ಜೀವಶಾಸ್ತ್ರ ವಿಭಾಗದ ಪರೀಕ್ಷೆಗಳು ನಡೆಯಲಿದ್ದರೆ, ಎರಡನೇ ದಿನ ರಸಾಯನ ಶಾಸ್ತ್ರ, ಭೌತಶಾಸ್ತ್ರ ಪರೀಕ್ಷೆಗಳು, 3ನೇ ದಿನ ಗಡಿನಾಡ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.