ನಿಮ್ಮ ಮಕ್ಕಳಿಗೆ ಜಂಕ್​​​ ಪುಡ್​ನಿಂದ ದೂರವಿರಿಸಿ ಆರೋಗ್ಯ ಕಾಪಾಡಿ

ಬೆಂಗಳೂರು: ಮಕ್ಕಳು ಪ್ರತಿದಿನ ಒಂದಲ್ಲ ಒಂದು ಒತ್ತಡದ ಮಧ್ಯೆಯೇ ಬದುಕುತ್ತಿದ್ದಾರೆ. ಈ ಒತ್ತಡದ ಜೀವನ ಹಲವು ಸಮಸ್ಯೆಗಳಿಗೆ ಒಂದು ಕಡೆ ಎಡೆಮಾಡಿಕೊಟ್ಟರೆ, ಮತ್ತೊಂದು ಕಡೆ ಪೀಜಾ ಬರ್ಗರ್ ರಸ್ತೆಯ ಬದಿಯ ಆಹಾರ, ಕರಿದ ತಿಂಡಿಗಳನ್ನು ತಿನ್ನುವುದರಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಮಕ್ಕಳು ಈಗಿನ ಆಹಾರ ಪದಾರ್ಥಗಳನ್ನ ಸೇವನೆ ಮಾಡ್ತಿದ್ದಾರೆ. ಆಗಿನ ಆಹಾರ ಪದಾರ್ಥಗಳಾದ ದವಸ ಧಾನ್ಯಗಳನ್ನ ಸೇವನೆ ಮಾಡುತ್ತಿದ್ದಲ್ಲಿ ಇಂತಹ ರೋಗಗಳು ಹರಡದಂತೆ ತಡೆಯಬಹುದು ಎಂದು ಆರೋಗ್ಯವನ್ನ ಹೇಗೆ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ಶಿಕ್ಷಣ ತಜ್ಞರು ಕೂಡ ಮಕ್ಕಳಲ್ಲಿ ಚಿಕ್ಕ ಚಿಕ್ಕ ವಯಸ್ಸಿಗೆ ತಲೆನೋವು, ಮೈಗ್ರೇನ್ ಇನ್ನೀತರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೀರುವುದು ಅತ್ಯಂತ ಬೇಸರದ ಸಂಗತಿ. ಅಷ್ಟೇ ಅಲ್ಲದೇ ಮಕ್ಕಳು ಆರೋಗ್ಯವನ್ನ ಕಾಪಾಡಿಕೊಳ್ಳುವಂತ ಗಮನ ಹರಿಸಬೇಕು. ಪೋಷಕರು ಕೂಡ ಎಚ್ಚರವಹಿಸಬೇಕೆಂದು ಎನ್ನತ್ತಾರೆ ಶಿಕ್ಷಣ ತಜ್ಞರು.

ಒಟ್ಟಿನಲಿ ಮಕ್ಕಳಿಗೆ ಪೌಷ್ಟಿಕಾಂಶಭರಿತವಾದ ನಿಯಮಿತವಾದ ಆಹಾರವನ್ನ ನೀಡುವ ಮೂಲಕ ಹಲವು ರೋಗಗಳಿಗೆ ತುತ್ತಾಗದಂತೆ ರಕ್ಷಣೆ ಮಾಡಬಹುದು. ಈ ನಿಟ್ಟಿನಲ್ಲಿ ಪೋಷಕರು ಕೂಡ ಎಚ್ಚೆತ್ತಕೊಳ್ಳುವುದು ಅವಶ್ಯಕವಾಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!