ರಾಬರ್ಟ್ ಚಿತ್ರದ ಬಗ್ಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದೇನು ಗೊತ್ತಾ…?

ದಾವಣಗೆರೆ. ನಾಳೆ ಕೇಂದ್ರದಿಂದ ಒಳ್ಳೆಯ ಬಜೆಟ್ ನೀಡುವ ನಿರೀಕ್ಷೆ ಇದೆ ಎಂದು ದಾವಣಗೆರೆಯ ಎವಿಕೆ ರಸ್ತೆಯ ಯುನಿಟಿ ಹೆಲ್ತ್ ಕೇರ್ ಆಸ್ಪತ್ರೆಯ 40 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ವೇಳೆ ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದರು.

ಇನ್ನು ಇದೇ ಸಂದರ್ಭದಲ್ಲಿ ರಾಬರ್ಟ್ ಚಿತ್ರ ಬಿಡುಗಡೆಯ ಗೊಂದಲದ ಬಗ್ಗೆ ಮಾತನಾಡಿದ ಅವರು ಒಳ್ಳೆ ಚಿತ್ರ ಇದ್ರೆ ಎಲ್ಲಾದ್ರೂ ನೋಡೇ ನೋಡ್ತಾರೆ. ರಾಬರ್ಟ್ ಚಿತ್ರ ಬಿಡುಗಡೆ ಇದ್ದಾಗ ಆಂದ್ರದಲ್ಲಿ ದೊಡ್ಡ ನಟರ ಚಿತ್ರ ಬಿಡುಗಡೆ ಇತ್ತು ಎಂದು ಚಿತ್ರಮಂದಿರಗಳು ನೀಡಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಫಿಲ್ಮ್ ಚೇಂಬರ್ಗೆ ದೂರು ಸಹ ನೀಡಿದ್ದಾರೆ, ಅವರೆ ಬಗೆಹರಿಸುತ್ತಾರೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ