ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ ಉಂಟಾಗಿದ್ದು, ಮುಂಗಾರು ದುರ್ಬಲಗೊಂಡಿದ್ದು, ಜುಲೈ 5ರವರೆಗೆ ಮಳೆಯ ಪ್ರಮಾಣ ಕಡಿಮೆ ಆಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸ್ಥಳೀಯ ಹವಾಮಾನದಲ್ಲಿ ಆದ ಬದಲಾವಣೆಯಿಂದ ಜುಲೈ 5ರವರೆಗೆ ಮಳೆ ಕಡಿಮೆ ಆಗಲಿದ್ದು, ಜನಂತರ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 21ರಿಂದ ಮುಂಗಾರು ಪ್ರಭಾವ ಕಡಿಮೆ ಆಗಲು ಪ್ರಾರಂಭಗೊಂಡಿದ್ದು, ಜುಲೈ 29ರವರೆಗೆ ಇದು ಮುಂದುವರಿಯಲಿದೆ. ಇದರಿಂದ ಜುಲೈ 5ರೆವರೆಗೆ ಮಳೆ ಕಡಿಮೆ ಆಗಲಿದ್ದು, ನಂತರ ಮತ್ತೆ ಮುಂಗಾರು ಚುರುಕುಗೊಂಡು ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.