ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡ್ತಿದ್ದ ಆರೋಪಿ ಶಾಕೀಲ್ ಅಹ್ಮದ್ ನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಎರಡು ಪಿಸ್ತೂಲ್, ನಾಲ್ಕು ಜೀವಂತ ಗುಂಡು ಜಪ್ತಿ ಮಾಡಲಾಗಿದೆ. ಮಹರಾಷ್ಟ್ರದ ಅಮರಾವತಿಯಿಂದ ಪಿಸ್ತೂಲ್ ತಂದು ಮಾರುತ್ತಿದ್ದ. ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸದ ಜೊತೆ ಪಿಸ್ತೂಲ್ ಮಾರಾಟ ಮಾಡಿಕೊಂಡಿದ್ದ. ಆರೋಪಿಯನ್ನು 2016 ರಲ್ಲಿ ಸಂಪಿಗಹಳ್ಳಿ ಪೊಲೀಸರು ಹಾಗೂ 2019ರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ನಂತರ ಮತ್ತೆ ಪಿಸ್ತೂಲ್ ಮಾರಾಟದಲ್ಲಿ ಭಾಗಿಯಾಗಿ ಮತ್ತೆ ಪೊಲೀಸರ ಬಲೆಗೆ ಬಿದಿದ್ದಾನೆ. ಸದ್ಯ ಆರೋಪಿಯನ್ನ ಬಾಣಸವಾಡಿ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
0 100 Less than a minute