ಲವ್ ಬ್ರೇಕ್ಅಪ್ ಎಂದ ಯುವತಿ : ಲೈಫ್ ಎಂಡ್ ಎಂದ ಪ್ರೇಮಿ..!

ಬೆಂಗಳೂರು. ಮನಸಾರೆ ಲವ್ ಮಾಡ್ತಿದ್ದ ಯುವತಿ ನನ್ನ ಪ್ರೀತಿಗೆ ನೋ.. ಅಂದ್ಲು ಎನ್ನುವ ಕಾರಣಕ್ಕೆ ಆಕೆಯ ಮೇಲೆ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸದ್ಯ ಪಾಗಲ್ ಪ್ರೇಮಿಯನ್ನು ಬೆಂಗಳೂರು ಪೊಲೀಸರು ವಶಕ್ಕೆಪಡೆದಿದ್ದಾರೆ.
ದೀಪಕ್ (32) ಬಂಧಿತ ಪಾಗಲ್ ಪ್ರೇಮಿ. ಈತ ಎರಡು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ವರ್ಷ ಆಗಸ್ಟ್ನಲ್ಲಿ ಲವ್ ಬ್ರೇಕ್ ಅಪ್ ಅಗಿತ್ತು. ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಯುವತಿ ದೀಪಕ್ನ ಜೊತೆ ಸಂಪರ್ಕ ಕಡಿತಗೊಳಿಸಿದ್ದಾಳೆ.
ಇದರಿಂದ ಕೋಪಗೊಂಡ ದೀಪಕ್ ಹಲವು ಬಾರಿ ಪದೇ ಪದೇ ಕರೆ ಮಾಡಿ ಹಿಂಸೆ ನೀಡಿದ್ದ. ಕಳೆದ ಹದಿನೈದು ದಿನದ ಹಿಂದೆ ಯುವತಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಳು ಎನ್ನಲಾಗಿದೆ. ಕಳೆದ ತಿಂಗಳು 25ರಂದು ಯುವತಿ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ. ಈ ಹಿನ್ನಲೆಯಲ್ಲಿ ಯುವತಿ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಳು. ದೀಪಕ್ಗಾಗಿ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಇಂದು ಪಾಗಲ್ ಪ್ರೇಮಿಯನ್ನ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.