ಬಲೂನ್ ಮಾರೋ ನೆಪದಲ್ಲಿ ಮನೆ ದರೋಡೆ ಮಾಡುತ್ತಿದ್ದ ನಟೋರಿಯಸ್ ಬವರಿಯಾ ಗ್ಯಾಂಗ್ ಅನ್ನು ಬೆಂಗಳೂರು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬವಾರಿಯಾ ಗ್ಯಾಂಗ್ ನ ಮುಖೇಶ್, ಧರ್ಮ ಸೇರಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ನಗರದಲ್ಲಿ ಸಾಲು ಸಾಲು ಸರಗಳ್ಳತನ ಮಾಡಿ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ಬವಾರಿಯಾ ಗ್ಯಾಂಗ್ ಇತ್ತೀಚೆಗೆ ಸರಗಳ್ಳತನ ಬಿಟ್ಟು ಮನೆ ಕಳ್ಳತನಕ್ಕಿಳಿದಿತ್ತು.
ಬಲೂನ್ ಹಿಡಿದು ಏರಿಯಾ ಏರಿಯಾ ಸುತ್ತುವ ಬವಾರಿಯಾ ಗ್ಯಾಂಗ್, ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ದರೋಡೆಗೆ ಸಂಚು ರೂಪಿಸುತ್ತಿತ್ತು.
ಸರಗಳ್ಳತನ ಮಾಡಿದರೆ ಪೊಲೀಸರ ಕೈಗೆ ಸಿಕ್ಕಿಬೀಳುತ್ತೇವೆ ಎಂದು ಮನೆಗಳ್ಳತನಕ್ಕೆ ಇಳಿದಿತ್ತು. ಇದೀಗ ಬವಾರಿಯಾ ಗ್ಯಾಂಗ್ ಸದಸ್ಯರಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.